October 10, 2026
Saturday, October 10, 2026
spot_img

ಟಿ20 ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ: ಕೊಹ್ಲಿ, ವಾರ್ನರ್ ಸಾಲಿಗೆ ಸೇರಿದ ಪಾಕ್ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪೇಶಾವರ್ ಝಲ್ಮಿ ತಂಡದ ಸಾರಥಿ ಬಾಬರ್ ಆಝಂ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಅಬ್ಬರಿಸಿದ ಬಾಬರ್, ಕೇವಲ 51 ಎಸೆತಗಳಲ್ಲಿ 71 ರನ್ ಸಿಡಿಸುವ ಮೂಲಕ ತಮ್ಮ ವೃತ್ತಿಜೀವನದ 100ನೇ ಟಿ20 ಅರ್ಧಶತಕ ಪೂರೈಸಿದರು.

ಈ ಸಾಧನೆಯೊಂದಿಗೆ ಬಾಬರ್ ಆಝಂ ವಿಶ್ವ ಕ್ರಿಕೆಟ್‌ನ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ:

ಪಾಕಿಸ್ತಾನದ ನಂ.1: 100 ಅರ್ಧಶತಕ ಸಿಡಿಸಿದ ಪಾಕಿಸ್ತಾನದ ಮೊದಲ ಬ್ಯಾಟರ್.

ಏಷ್ಯಾದ ನಂ.2: ವಿರಾಟ್ ಕೊಹ್ಲಿ ನಂತರ ಈ ಸಾಧನೆ ಮಾಡಿದ ಏಷ್ಯಾದ ಎರಡನೇ ಆಟಗಾರ.

ವಿಶ್ವದ ನಂ.3: ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಬಳಿಕ ಜಾಗತಿಕವಾಗಿ ಮೂರನೇ ಸ್ಥಾನ.

ಬಾಬರ್ ಆಝಂ ತಮ್ಮ 354 ಪಂದ್ಯಗಳ ಟಿ20 ವೃತ್ತಿಜೀವನದಲ್ಲಿ ಈ ಕೆಳಗಿನಂತೆ ಅರ್ಧಶತಕಗಳನ್ನು ಹಂಚಿಕೊಂಡಿದ್ದಾರೆ:

ಅಂತರರಾಷ್ಟ್ರೀಯ ಟಿ20: 39

ಪಿಎಸ್ಎಲ್: 38

ಬಿಪಿಎಲ್: 03

ಬಿಬಿಎಲ್: 02

ಎಲ್‌ಪಿಎಲ್: 01

ಇತರೆ: 17

Must Read