ಇತಿಹಾಸ ಅಧ್ಯಾಯನವು ಮಾನವೀಯ ಮೌಲ್ಯಗಳ ಅಭ್ಯುದಯಕ್ಕೆ ಅಡಿಗಲ್ಲು: ಸಿ.ಡಿ. ಜಯಣ್ಣ

ದಿಗಂತ ವರದಿ ಮಂಗಳೂರು:

ಇತಿಹಾಸ ಅಧ್ಯಾಯನವು ಮಾನವೀಯ ಮೌಲ್ಯಗಳ ಅಭ್ಯುದಯಕ್ಕೆ ಅಡಿಗಲ್ಲು. ಪ್ರಾಚೀನತೆಯ ಅಧ್ಯಯನವು ಭವಿಷ್ಯದಲ್ಲಿ ಸಂಸ್ಕಾರಯುಕ್ತ ಬದುಕಿನ ಅನುಷ್ಠಾನಕ್ಕೆ ಪೂರಕವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ ಅಧ್ಯಯನ ಅತ್ಯಗತ್ಯ ಎಂದು ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಹೇಳಿದರು.

ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಸಂಘ ಹಾಗೂ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಂಟಿ ಆಶ್ರಯದಲ್ಲಿ ಮಂಗಳೂರಿನ ಬಿ.ಇ.ಎಂ ಕಾಲೇಜಿನಲ್ಲಿ ಗುರುವಾರ ನಡೆದ ಇತಿಹಾಸ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸವನ್ನು ಉಳಿಸಿ ಬೆಳೆಸುವ ಕಾರ್ಯ ಸರ್ವರ ಆದ್ಯ ಕರ್ತವ್ಯ. ಆಧುನಿಕ ಯುಗದಲ್ಲಿ ಉತ್ತಮ ಗುಣ ನಡತೆಯ ಜೀವನ ಶೈಲಿಯ ಜ್ಞಾನ ವೃದ್ದಿಗೆ ಇದು ಪೂರಕವಾಗಿದೆ. ಬದುಕಲು ಆವಶ್ಯಕ ವಾದ ವಿದ್ಯೆಯು ಇತಿಹಾಸದಿಂದ ದೊರಕುತ್ತದೆ. ನಿರಂತರವಾಗಿ ದ.ಕ ಜಿಲ್ಲೆಯು ಫಲಿತಾಂಶ ದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಸಂಪಾದಿಸುತ್ತಾ ಬಂದಿದೆ. ಈ ವರ್ಷವೂ ಸರ್ವ ಉಪನ್ಯಾಸಕರ ಬೆಂಬಲದಿಂದ ಮತ್ತು ಕಠಿಣ ಪರಿಶ್ರಮದಿಂದ ಜಿಲ್ಲೆಯು 100% ಫಲಿತಾಂಶ ಪಡೆಯುವಂತಾಗಬೇಕು ಎಂದರು.

ಬಿಇಎಂ ವಿದ್ಯಾಸಂಸ್ಥೆ ಯ ಸಂಚಾಲಕ ರೆವ.ಮನೋಜ್ ಕಾರ್ಯಾಗಾರವನ್ನು ಉದ್ಘಾಟಿಸಿದರು.ದ.ಕ. ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ಬಿಇಎಂ ಕಾಲೇಜಿನ ಪ್ರಾಂಶುಪಾಲೆ ಅಪರ್ಣ ಪ್ರವೀಣ್ ಚಂದ್ರ ಮುಖ್ಯ ಅತಿಥಿಗಳಾಗಿದ್ದರು.ದ.ಕ.ಜಿಲ್ಲಾ ಪ.ಪೂ ಇತಿಹಾಸ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಸನ್ನ ಎನ್.ಎಚ್ ,ಕಾರ್ಯದರ್ಶಿ ಐತ್ತಪ್ಪ.ಯು,ಉಪಾಧ್ಯಕ್ಷೆ ಪೂರ್ಣಿಮಾ ಕಾಮತ್, ಕೋಶಾಧಿಕಾರಿ ಗಾಯತ್ರಿ ಶೆಟ್ಟಿ, ಸಂಘಟನಾವ ಕಾರ್ಯದರ್ಶಿ ಮನಮೋಹನ ವೇದಿಕೆಯಲ್ಲಿದ್ದರು.

ಗೌರವಾರ್ಪಣೆ:
ಸಮಾರಂಭದಲ್ಲಿ ಮಂಗಳೂರು ವಿ.ವಿ.ಸೆನೆಟ್ ಸದಸ್ಯರಾಗಿ ಆಯ್ಕೆಯಾದ ರಘರಾಜ್ ಕದ್ರಿ, ಫೆಬ್ರವರಿ ಯಲ್ಲಿ ನಿವೃತ್ತರಾಗಲಿರುವ ಸಂಘದ ಉಪಾಧ್ಯಕ್ಷೆ ಪೂರ್ಣಿಮಾ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು‌.
ಇತಿಹಾಸ ಉಪನ್ಯಾಸಕ ಧರ್ಮಪಾಲ ಗೌಡ ಕಾರ್ಯಕ್ರಮ ನಿರೂಪಿಸಿದರು.ದ.ಕ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಚಾರ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!