ಇತಿಹಾಸ ಬರೆಯಲಿದೆ ರಾಮಲಲಾ ಪ್ರಾಣಪ್ರತಿಷ್ಠೆ: ವಿಶ್ವದ ದೊಡ್ಡಣ್ಣನ ನೆಲದಲ್ಲೂ ಇದೆ ನೇರಪ್ರಸಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಯೋಧ್ಯೆಯ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆ ಕ್ಷಣಗಳನ್ನು ಸಂಭ್ರಮಿಸಲು ಕೇವಲ ಭಾರತ ಮಾತ್ರವಲ್ಲ ವಿಶ್ವಕ್ಕೆ ವಿಶ್ವವೇ ಸಜ್ಜಾಗುತ್ತಿದೆ!

ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಈ ಐತಿಹಾಸಿಕ ಕ್ಷಣಗಳನ್ನು ನೇರಪ್ರಸಾರ ಮಾಡಲು ವಿಶ್ವದ ದೊಡ್ಡಣ್ಣ ಅಮೆರಿಕ ಕೂಡಾ ಸಜ್ಜಾಗಿದೆ. ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಇದಕ್ಕಾಗಿ ವ್ಯವಸ್ಥೆಗಳು ನಡೆಯುತ್ತಿದೆ. ಇನ್ನು ಅಲ್ಲಿನ ವಿವಿಧ ಭಾರತೀಯ ರಾಯಭಾರಿ ಕಚೇರಿಗಳು ಕೂಡಾ ಈ ಅಪರೂಪದ ದೃಶ್ಯಾವಳಿಗಳನ್ನು ನೇರಪ್ರಸಾರ ಮಾಡಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!