February 6, 2026
Friday, February 6, 2026
spot_img

ಹಿಟ್ ಆಂಡ್ ರನ್ ಕೇಸ್: ಮಲಯಾಳಂ ನಟ ಮಣಿಯನ್‌ಪಿಳ್ಳ ರಾಜು ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕ ಮಣಿಯನ್‌ಪಿಳ್ಳ ರಾಜು ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರ ವಿರುದ್ಧ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ.

ರಾಜು ಚಾಲನೆ ಮಾಡುತ್ತಿದ್ದ ಕಾರು ತ್ರಿವೇಂಡ್ರಮ್ ಕ್ಲಬ್ ಸಮೀಪ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರಿಗೆ ಕಾಲಿನ ಎಲುಬು ಮುರಿದಿದ್ದು, ಮತ್ತೊಬ್ಬರಿಗೆ ತಲೆ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:

ಘಟನೆಯ ನಂತರ ಮಣಿಯನ್‌ಪಿಳ್ಳ ರಾಜು ಸ್ಥಳದಿಂದ ಪರಾರಿಯಾದ ಆರೋಪ ಕೇಳಿಬಂದಿದ್ದು, ಸ್ಥಳದಲ್ಲೇ ಪತ್ತೆಯಾದ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದರು. ಬಳಿಕ ನಟ ಸ್ವಯಂಪ್ರೇರಿತವಾಗಿ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಬೈಕ್ ವೇಗವಾಗಿ ಬಂದ ಕಾರಣ ಅಪಘಾತ ಸಂಭವಿಸಿದ್ದು, ಆಘಾತದಿಂದ ಏನು ಮಾಡಬೇಕೆಂದು ತಿಳಿಯದೆ ಅಲ್ಲಿಂದ ತೆರಳಿದ್ದಾಗಿ ಅವರು ತಿಳಿಸಿದ್ದಾರೆ.

ಪ್ರಸ್ತುತ ನಿರ್ಲಕ್ಷ್ಯದ ಚಾಲನೆ ಹಾಗೂ ಅಪಘಾತದ ಮಾಹಿತಿ ನೀಡದೆ ತೆರಳಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಅಪಘಾತದ ವೇಳೆ ಮದ್ಯಪಾನ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆಯ ವರದಿಯನ್ನು ಪೊಲೀಸರು ನಿರೀಕ್ಷಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !