September 13, 2026
Sunday, September 13, 2026
spot_img

ಕೊನೆಗೂ ಕಡಿಮೆ ಆಗ್ತಿದೆ ಚಿನ್ನ-ಬೆಳ್ಳಿ ದರ: 14 ಸಾವಿರದೊಳಗೆ ಬಂದಿಳಿದ ರೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸೇರಿದಂತೆ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಮುಂದುವರಿದಿದೆ. ನಿನ್ನೆ ಕಂಡ ಕುಸಿತದ ಬಳಿಕ ಇಂದು ಕೂಡ ಆಭರಣ ಚಿನ್ನದ ದರದಲ್ಲಿ ಮತ್ತಷ್ಟು ಕಡಿತವಾಗಿದ್ದು, ಇವತ್ತು ಶುಕ್ರವಾರ ಚಿನ್ನದ ಬೆಲೆ 190 ರೂ ನಷ್ಟು ಕಡಿಮೆಗೊಂಡಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಮತ್ತೆ 1.39 ಲಕ್ಷ ರೂಪಾಯಿಯೊಳಗೆ ಇಳಿದಿದೆ. ವಿದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಇಳಿಕೆಯಾಗಿರುವ ಪರಿಣಾಮ ದೇಶೀಯ ದರಗಳ ಮೇಲೆ ಪ್ರಭಾವ ಬೀರಿದೆ.

ಇಂದು ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,39,650 ರೂಪಾಯಿ ಆಗಿದ್ದು, 24 ಕ್ಯಾರಟ್ ಚಿನ್ನದ ದರ 1,52,350 ರೂಪಾಯಿಯಷ್ಟಿದೆ. ಬೆಳ್ಳಿಯ ದರದಲ್ಲೂ ಕುಸಿತ ಮುಂದುವರಿದು, 100 ಗ್ರಾಂ ಬೆಳ್ಳಿ ಬೆಲೆ 27,500 ರೂಪಾಯಿಗೆ ತಲುಪಿದೆ. 1 ಗ್ರಾಂ 22 ಕ್ಯಾರಟ್ ಚಿನ್ನ ಸುಮಾರು 13,965 ರೂಪಾಯಿ, 24 ಕ್ಯಾರಟ್ ಚಿನ್ನ 15,235 ರೂಪಾಯಿ ಮತ್ತು ಬೆಳ್ಳಿ 1 ಗ್ರಾಂಗೆ 275 ರೂಪಾಯಿ ಇದೆ.

ಇದನ್ನೂ ಓದಿ:

ಚೆನ್ನೈ, ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಚಿನ್ನದ ದರದಲ್ಲಿ ಅಲ್ಪ ಮಟ್ಟಿನ ವ್ಯತ್ಯಾಸ ಮಾತ್ರ ಕಂಡುಬರುತ್ತಿದೆ. ಕೆಲವು ರಾಜ್ಯಗಳಲ್ಲಿ ಬೆಳ್ಳಿ ದರ 280 ರೂಪಾಯಿವರೆಗೆ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !