ಹೊಸದಿಗಂತ ವರದಿ,ಬೀದರ್:
ಭಾಲ್ಕಿ ತಾಲ್ಲೂಕಿನ ಪಾಂಡ್ರಿ ಗ್ರಾಮದ ಹತ್ತಿರ ಹಿಟ್ ಆ್ಯಂಡ್ ರನ್ ರಸ್ತೆ ದುರಂತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟು, ಇನ್ನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ನೆರೆಯ ಮಹಾರಾಷ್ಟ್ರದ ನಾಂದೇಡ್ ಮೂಲದ ನಾಗೂರಾವ್(40) ಹಾಗೂ ಭಾನುದಾಸ್ (42) ಸ್ಥಳದಲ್ಲೇ ಮೃತಪಟ್ಟರೆ, ಚಂದ್ರಕಾಂತ ಜಾಧವ್ ಗಂಭೀರ ಗಾಯಗೊಂಡಿದ್ದಾರೆ. ಮೂವರು ಬೈಕ್ ಮೇಲೆ ಔರಾದ್ ನಿಂದ ನಾಂದೇಡ್ ಹೋಗುತ್ತಿದ್ದರು. ಪಾಂಡ್ರಿ ಬಸ್ ನಿಲ್ದಾಣದ ಬಳಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಮೆಹಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.