ಮತ್ತೆ ಸದ್ದು ಮಾಡಿದ ಹಿಟ್​ಮ್ಯಾನ್: ಸ್ಫೋಟಕ ಶತಕ ಸಿಡಿಸಿದ ರೋಹಿತ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಕಟಕ್‌​ ಸ್ಟೇಡಿಯಮ್​​ನಲ್ಲಿ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​​ ತಂಡದ ವಿರುದ್ಧ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ.

305 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾ ಪರ ಓಪನಿಂಗ್​ ಮಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ಮಾಡಿದರು. ಆಕ್ರಮಣಕಾರಿ ಆಗಿ ಬ್ಯಾಟ್​ ಬೀಸಿದ ಇವರು ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಕೇವಲ 78 ಬಾಲ್​​ನಲ್ಲಿ 102 ರನ್​ ಸಿಡಿಸಿದ ರೋಹಿತ್​ ಬೌಂಡರಿಗಳ ಸುರಿಮಳೆಗೈದರು. ಬ್ಯಾಕ್​ ಟು ಬ್ಯಾಕ್​ 7 ಭರ್ಜರಿ ಸಿಕ್ಸರ್​ ಸಿಡಿಸಿದ್ರು. ಹಾಗೆಯೇ ಸುಮಾರು 9 ಫೋರ್​​ ಬಾರಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 130ಕ್ಕೂ ಹೆಚ್ಚಿತ್ತು. ಈ ಮೂಲಕ ತನ್ನನ್ನು ಟೀಕಿಸಿದವರಿಗೆ ಖಡಕ್​ ಉತ್ತರ ಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!