ಹಾಕಿ ವಿಶ್ವಕಪ್ ಟೂರ್ನಿ: ಭಾರತ ಇಂಗ್ಲೆಂಡ್ ನಡುವೆ ಬಿಗ್ ಫೈಟ್, ಗೋಲಿಲ್ಲದೆ ಟೈನಲ್ಲಿ ಪಂದ್ಯ ಅಂತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಾಕಿ ವಿಶ್ವಕಪ್ ಟೂರ್ನಿಯಲ್ಲಿಸ್ಪೇನ್ ವಿರುದ್ದ ಗೆದ್ದು ಶುಭಾರಂಭ ಮಾಡಿದ್ದ ಭಾರತ ಇಂಗ್ಲೆಂಡ್ ವಿರುದ್ಧ ತೀವ್ರ ಪೈಪೋಟಿ ನಡೆಯಿತು. 60 ನಿಮಿಷಗಳ ರೋಚಕ ಹೋರಾಟದಲ್ಲಿ ಯಾವುದೇ ಗೆೋಲು ದಾಖಲಾಗಲಿಲ್ಲ. ಹೀಗಾಗಿ ಪಂದ್ಯ 0-0 ಅಂತರದಲ್ಲಿ ಟೈಗೊಂಡಿತು.

ಪಂದ್ಯ ಆರಂಭಗೊಂಡ 8ನೇ ನಿಮಿಷಕ್ಕೆ ಇಂಗ್ಲೆಂಡ್ ಪೆನಾಲ್ಟಿ ಕಾರ್ನರ್ ಪಡೆಯಿತು.ಆದರೆ ಭಾರತದ ರಕ್ಷಣೆಗೆ ಗೋಲು ದಾಖಲಾಗಲಿಲ್ಲ. ಇದರ ಬೆನ್ನಲ್ಲೇ ಒಂದೆರೆಡು ಅವಕಾಶ ಪಡೆಯಿತು. ಆದರೆ ಭಾರತ ಗೋಲು ಬಿಟ್ಟುಕೊಡಲಿಲ್ಲ. 15 ನಿಮಿಷ ಅಂತ್ಯದ ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

24 ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಭಾರತದ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಲು ಇಂಗ್ಲೆಂಡ್ ಅವಕಾಶ ನೀಡಲಿಲ್ಲ.

ಮನ್ದೀಪ್ ಹಾಗೂ ಅಕ್ಷದೀಪ್ ಕೈಗೆ ಸಿಕ್ಕ ಅವಕಾಶಗಳನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಇಂಗ್ಲೆಂಡ್ ನಡುವಿನ ಪಂದ್ಯ 0-0 ಅಂತರದಲ್ಲಿ ಟೈಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!