May 28, 2026
Thursday, May 28, 2026
spot_img

IPL | ವಿವಾದದ ಸುಳಿಯಲ್ಲಿ ಸಿಲುಕಿದ ಹೋಲ್ಡರ್‌ ಕ್ಯಾಚ್‌: ಅಂಪೈರ್ ತೀರ್ಪಿಗೆ ಕೆರಳಿದ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ನಲ್ಲಿ ಇಂದು ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ವೇಳೆ ವಿವಾದಯೊಂದು ಭುಗಿಲೆದ್ದಿದೆ .

ನಾಯಕ ರಜತ್ ಪಾಟಿದಾರ್ ಅವರು ಅರ್ಷದ್ ಖಾನ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಈ ವೇಳೆ ಚೆಂಡು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ ಕಡೆ ಮೇಲಕ್ಕೆ ಹೋದಾಗ ಬೌಂಡರಿ ಲೈನ್ ಬಳಿ ಫಿಲ್ಡಿಂಗ್ ಮಾಡುತ್ತಿದ್ದ ಜೇಸನ್ ಹೋಲ್ಡರ್ ಕ್ಯಾಚ್ ಪಡೆಡಿದ್ದಾರೆ .ಆದರೆ ಈ ವೇಳೆ ಚೆಂಡು ಕ್ಯಾಚ್ ಹಿಡಿದು ನೆಲಕ್ಕೆ ತಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಅಂಪೈರ್ ಔಟ್ ನೀಡಿದ್ದಾರೆ. ಇದು ಆರ್‌ಸಿಬಿ ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ಮೇಲ್ನೋಟಕ್ಕೆಅದ್ಭುತ ಕ್ಯಾಚ್ ಎನಿಸಿದರೂ, ಹತ್ತಿರದ ರೀಪ್ಲೇಗಳನ್ನು ಗಮನಿಸಿದಾಗ ಚೆಂಡು ಅಥವಾ ಹೋಲ್ಡರ್ ಅವರ ಬೆರಳುಗಳು ನೆಲಕ್ಕೆ ತಾಗಿದಂತೆ ಭಾಸವಾಗುತ್ತಿತ್ತು. ಹೀಗಾಗಿ ಮೈದಾನದಲ್ಲಿದ್ದ ಅಂಪೈರ್‌ಗಳು ತೀರ್ಪನ್ನು ಥರ್ಡ್ ಅಂಪೈರ್‌ಗೆ ವರ್ಗಾಯಿಸಿದರು. ಟಿವಿ ಅಂಪೈರ್ ರೀಪ್ಲೇಗಳನ್ನು ಪರಿಶೀಲಿಸಿ ಅಂತಿಮವಾಗಿ ಔಟ್ ಎಂಬ ತೀರ್ಪು ನೀಡಿದರು.

ಈ ಬೆನ್ನಲ್ಲೇ ಆಗಷ್ಟೇ ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ ತಲುಪಿದ್ದ ವಿರಾಟ್ ಕೊಹ್ಲಿ, ಡಗೌಟ್‌ನಿಂದ ಹೊರಬಂದು ಬೌಂಡರಿ ಲೈನ್ ಹತ್ತಿರವಿದ್ದ ಅಂಪೈರ್‌ಗಳ ಬಳಿ ಆಕ್ರೋಶ ಹೊರಹಾಕಿದ್ದಾರೆ. ಆರ್‌ಸಿಬಿ ಫ್ಯಾನ್ಸ್ ಕೂಡ ಅಂಪೈರ್‌ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !