Tuesday, March 28, 2023

Latest Posts

ಹೋಳಿ ಹಬ್ಬದ ಸಂಭ್ರಮ: ರಂಗು ರಂಗಿನ ಬಣ್ಣಗಳೊಂದಿಗೆ ಕುಣಿದಾಡಿದ ಆರ್​ಸಿಬಿ ಆಟಗಾರ್ತಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ. ಎಲ್ಲೆಡೆ ಬಣ್ಣವನ್ನು ಎರಚಿ ಸಡಗರದಿಂದ ಆಚರಿಸುತ್ತಿದ್ದಾರೆ. ಇತ್ತ ಆರ್​ಸಿಬಿ ಆಟಗಾರ್ತಿಯರು ಕೂಡ ರಂಗು ರಂಗಿನ ಬಣ್ಣಗಳೊಂದಿಗೆ ಸಂಭ್ರಮಿಸಿದ್ದಾರೆ.

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯುಸಿ ಆಗಿರುವ ಆರ್​ಸಿಬಿ , ಮಂಗಳವಾರ ಹೋಳಿ ಹಬ್ಬದ ಸಂಭ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.


ವಿದೇಶಿ ಆಟಗಾರ್ತಿಯರಾದ ಹೀದರ್ ನೈಟ್, ಮೇಗನ್ ಶಟ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ ಮೊದಲ ಬಾರಿಗೆ ಹೋಳಿಯನ್ನು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ತಂಡದ ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್ ಸೇರಿದಂತೆ ಎಲ್ಲಾ ಸದಸ್ಯರು ಸಡಗರದೊಂದಿಗೆ ಬಣ್ಣವನ್ನು ಹಚ್ಚುತ್ತಾ, ಹಚ್ಚಿಸಿಕೊಳ್ಳುತ್ತಾ ಸಂತಸದಿಂದ ಕುಣಿದಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!