ಚಲಿಸುತ್ತಿದ್ದ ಸ್ಕೂಟರ್​ನಲ್ಲಿ ಹುಡುಗಿಯರ ಹೋಳಿ ರೋಮ್ಯಾನ್ಸ್: ವಿಡಿಯೋ ವೈರಲ್ ಬೆನ್ನಲ್ಲೇ ಬಿತ್ತು ದೊಡ್ಡ ಮೊತ್ತದ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದೆಲ್ಲೆಡೆ ಹೋಳಿ ಹಬ್ಬವನ್ನು ಸಂಭ್ರಮ.ಎಲ್ಲೆಡೆ ಜನರು ಬಣ್ಣಗಳಲ್ಲಿ ಮಿಂದೆದ್ದರು. ಇದರ ನಡುವೆಯೇ ಉತ್ತರ ಪ್ರದೇಶದ ವಿಡಿಯೋ ಒಂದು ಅಂತರ್ಜಾಲದಲ್ಲಿ ಹರಿದಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ .

ಹೌದು,ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಲಿಸುತ್ತಿದ್ದ ಸ್ಕೂಟರ್‌ನಲ್ಲಿ ಹುಡುಗಿಯರು ಮುಖಾಮುಖಿಯಾಗಿ ಕುಳಿತು ಒಬ್ಬರ ಮೇಲೊಬ್ಬರು ಬಿದ್ದು, ಅಶ್ಲೀಲವಾಗಿ ವರ್ತಿಸುತ್ತ ಬಣ್ಣ ಬಳಿದುಕೊಳ್ಳುತ್ತಿದ್ದರು. ಈ ವೇಳೆ ಹುಡುಗ ಸ್ಕೂಟರ್ ಓಡಿಸುತ್ತಿದ್ದ. ಮತ್ತೊಬ್ಬ ವ್ಯಕ್ತಿ ವಿಡಿಯೋ ಚಿತ್ರೀಕರಿಸಿದ್ದಾನೆ .

ಇತ್ತ ವೈರಲ್ ವಿಡಿಯೋದಲ್ಲಿ, ಇಬ್ಬರು ಹುಡುಗಿಯರು ಸ್ಕೂಟರ್ ಮೇಲೆ ಕುಳಿತು ಬಾಲಿವುಡ್ ನ ‘ಮೋಹೆ ರಂಗ್ ಲಗಾಡೆ’ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಹುಡುಗಿಯರು ನೃತ್ಯ ಮಾಡುತ್ತಿದ್ದರಾ, ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದರಾ ಅಥವಾ ಪ್ರಣಯದಲ್ಲಿ ಮಗ್ನರಾಗಿದ್ದರಾ ಎಂದು ವೀಡಿಯೋ ವೀಕ್ಷಿಸಿದ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದರು. ಜೊತೆಗೆ ವೈರಲ್ ವೀಡಿಯೊ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇದಾದ ಬೆನ್ನಲ್ಲೇ ನೋಯ್ಡಾ ಪೊಲೀಸರು ಈ ಕೃತ್ಯ ವೆಸಗಿದವರನ್ನು ಪತ್ತೆ ಹಚ್ಚಿದ್ದು, ಬರೋಬ್ಬರಿ 33,000 ರೂ. ದಂಡ ವಿಧಿಸಿದ್ದಾರೆ.

ಈ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದು,ನಿಯಮಗಳ ಪ್ರಕಾರ ಇ-ಚಲನ್ (ರೂ. 33000/- ದಂಡ) ನೀಡುವ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

https://twitter.com/noidatraffic/status/1772100208148766917?ref_src=twsrc%5Etfw%7Ctwcamp%5Etweetembed%7Ctwterm%5E1772100208148766917%7Ctwgr%5E854f8de363ef2785f6a1e3032b4f57f14bf6d4f1%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fforyou%3Fmode%3Dpwaaction%3Dclicklaunch%3Dtrue

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!