Friday, June 2, 2023

Latest Posts

ಸಿನಿರಂಗದಲ್ಲಿ ಮತ್ತೊಂದು ವಿಷಾದ: ನಿಂತಲ್ಲಿಯೇ ಕುಸಿದು ಬಿದ್ದು ಖ್ಯಾತ ಹಾಲಿವುಡ್ ನಟ ಸಾವು

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿಗೆ ಸಿನಿರಂಗದಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿವೆ. ಹಲವು ಖ್ಯಾತ ನಟರು ಅನುಕ್ರಮವಾಗಿ ನಿಧನ ಹೊಂದುತ್ತಿರುವ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಒಬ್ಬರ ಸಾವು ಮರೆಯುವ ಮುನ್ನವೇ ಮತ್ತೊಬ್ಬರ ಸಾವಿನೊಂದಿಗೆ ಅಭಿಮಾನಿಗಳು, ಸಿನಿಪ್ರೇಮಿಗಳು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಇಂದು ಖ್ಯಾತ ಹಾಲಿವುಡ್ ನಟ ಪಾಲ್ ಗ್ರಾಂಟ್ ನಿಧನರಾಗಿದ್ದಾರೆ.

ಹ್ಯಾರಿ ಪಾಟರ್ ಮತ್ತು ಸ್ಟಾರ್ ವಾರ್ಸ್‌ನಂತಹ ಅನೇಕ ಚಲನಚಿತ್ರಗಳಿಂದ ಪ್ರಭಾವಿತರಾದ ನಟ ಪಾಲ್ ಗ್ರಾಂಟ್ ಲಂಡನ್‌ನ ಆಸ್ಟರ್ ರೋಡ್ ಸೇಂಟ್ ಪ್ಯಾನ್‌ಕ್ರಾಸ್ ನಿಲ್ದಾಣದಲ್ಲಿ ಹಠಾತ್ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪಾಲ್ ಗ್ರಾಂಟ್ ಅನೇಕ ಬ್ರಿಟಿಷ್ ಮತ್ತು ಹಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಪಾಂಡಿಲೋಪಿಫೈಸಲ್ ಡಿಸ್ಪ್ಲಾಸಿಯಾ ಎಂಬ ಅಪರೂಪದ ಆನುವಂಶಿಕ ಅಸ್ವಸ್ಥತೆಯನ್ನು ಹೊಂದಿದ್ದು, ಕುಬ್ಜ ದೇಹ ಹೊಂದಿದ್ದಾರೆ.  ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳೂ ಇದ್ದಾರೆ.

ಪಾಲ್ ಗ್ರಾಂಟ್ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಹಿಂದೆ ಪಾಲ್ ಕೂಡ ಕೊಕೇನ್ ತೆಗೆದುಕೊಳ್ಳುವಾಗ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಪತ್ತೆಯಾಗಿದ್ದ. ಇದೀಗ ತಮ್ಮ 56ನೇ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಯಿಂದ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ಪಾಲ್ ಗ್ರಾಂಟ್ ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!