Thursday, March 30, 2023

Latest Posts

ಕಿಮ್‌ನ ಹೊಸ ನಿಯಮ: ಈ ಸಿನಿಮಾಗಳನ್ನು ನೋಡಿದ್ರೆ ಜೈಲು ಪಾಲು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಕೊರಿಯಾ..ಈ ಹೆಸರು ಕೇಳಿದರೆ ಮೊದಲು ನೆನಪಾಗುವುದು ಆ ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಸರ್ವಾಧಿಕಾರಿ ಆಡಳಿತ. ಈ ದೇಶದಲ್ಲಿ ಜನ ಹಲವಾರು ನಿರ್ಬಂಧಗಳ ಅಡಿಯಲ್ಲಿ ವಾಸಿಸುತ್ತಿದ್ದಾರೆ. ಇದೀಗ ಆ ದೇಶದಲ್ಲಿ ವಿದೇಶಿ ಚಿತ್ರಗಳನ್ನು ನಿಷೇಧಿಸಲು ಕಿಮ್ ನಿರ್ಧರಿಸಿದ್ದಾರೆ. ವಿದೇಶಿ ಚಲನಚಿತ್ರಗಳನ್ನು (ಹಾಲಿವುಡ್ ಚಲನಚಿತ್ರಗಳು) ವೀಕ್ಷಿಸಲು ಸಿಕ್ಕಿಬಿದ್ದ ಮಕ್ಕಳ ಪೋಷಕರನ್ನು ಆರು ತಿಂಗಳ ಕಾಲ ಕಾರ್ಮಿಕ ಶಿಬಿರಗಳಿಗೆ ಕಳುಹಿಸಲಾಗುವುದು ಮತ್ತು ಮಕ್ಕಳನ್ನು ಐದು ವರ್ಷಗಳವರೆಗೆ ಜೈಲಿನಲ್ಲಿ ಇರಿಸಲಾಗುವುದು ಎಂದು ಕಾನೂನು ಜಾರಿಗೆ ತಂದಿದ್ದಾರೆ.

ನಿತ್ಯ ಪರಮಾಣು ಕ್ಷಿಪಣಿ ಪರೀಕ್ಷೆಗಳ ಮೂಲಕ ವಿಶ್ವದ ಎಲ್ಲಾ ದೇಶಗಳು ಉತ್ತರ ಕೊರಿಯಾದತ್ತ ನೋಡುವಂತೆ ಮಾಡುವ ಕಿಮ್ ಜಾಂಗ್ ಉನ್ ಇತ್ತೀಚೆಗೆ ಹಾಲಿವುಡ್ ಸಿನಿಮಾಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಹಾಲಿವುಡ್ ಸಿನಿಮಾಗಳಿಂದ ಯಾರಾದರೂ ಪ್ರಭಾವಿತರಾಗಿ ಬಂಡಾಯ ಎಬ್ಬಿಸಬಹುದೆಂಬ ಶಂಕೆಯಿಂದ ಕಿಮ್ ಅವುಗಳಿಗೂ ನಿಷೇಧ ಹೇರಿದ್ದಾರೆ. ಹಾಲಿವುಡ್ ಮತ್ತು ವಿದೇಶಿ ಸಿನಿಮಾಗಳನ್ನು ನೋಡುತ್ತಿರುವುದು ಕಂಡು ಬಂದರೆ ಆ ಮಕ್ಕಳ ಪೋಷಕರು ಜೈಲಿಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ. ಹಾಲಿವುಡ್ ಸಿನಿಮಾ ನೋಡುವ ಮಕ್ಕಳಿಗೆ ಐದು ವರ್ಷ ಶಿಕ್ಷೆ ವಿಧಿಸಿ ಶಿಬಿರಗಳಿಗೆ ಕಳುಹಿಸಲಾಗುತ್ತದೆ.

ಉತ್ತರ ಕೊರಿಯಾದ ನೆರೆಯ ರಾಷ್ಟ್ರವಾದ ದಕ್ಷಿಣ ಕೊರಿಯಾದಲ್ಲಿ ಚಲನಚಿತ್ರಗಳ ಕ್ಯಾಸೆಟ್‌ಗಳೊಂದಿಗೆ ಪತ್ತೆಯಾದ ಇಬ್ಬರು ಮಕ್ಕಳಿಗೆ ಒಟ್ಟಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಈ ಹಿಂದೆ ವರದಿಗಳಿವೆ. ಒಟ್ಟಿನಲ್ಲಿ ಕಿಮ್ ಜಾಂಗ್ ಉನ್ ಅವರ ದಬ್ಬಾಳಿಕೆಯ ಆಡಳಿತ ಮತ್ತು ವಿಚಿತ್ರ ಕಾನೂನುಗಳಿಂದ ಅಲ್ಲಿನ ಜನ ಬೇಸತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!