HOLLYWOOD | ಓಪನ್‌ಹೈಮರ್‌ ಸಿನಿಮಾದ ಹೀರೊ ಸಿಲಿಯನ್‌ ಮರ್ಫಿಗೆ ಆಸ್ಕರ್‌ ಪ್ರಶಸ್ತಿ ಗರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಓಪನ್‌ಹೈಮರ್‌ನ ನಾಯಕ, ಪ್ರಸಿದ್ಧ ಹಾಲಿವುಡ್ ನಟ ಸಿಲಿಯನ್ ಮರ್ಫಿಗೆ 2024ನೇ ಸಾಲಿನ ಆಸ್ಕರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಓಪನ್‌ಹೈಮರ್‌ನಲ್ಲಿನ ಪಾತ್ರಕ್ಕಾಗಿ ಸಿಲಿಯನ್ ಮರ್ಫಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆಡಿದ್ದಾರೆ. ಹೀಗಾಗಿ, ಓಪನ್‌ಹೈಮರ್‌ನ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಈ ಬಾರಿ ಒಪೆನ್‌ಹೈಮರ್‌ನ ಚಿತ್ರವು ಏಳು ಆಸ್ಕರ್‌ ಪ್ರಶಸ್ತಿಗಳನ್ನ ಪಡೆದುಕೊಂಡಿದೆ.

ಓಪನ್‌ಹೈಮರ್‌ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಕೂಡ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕ್ರಿಸ್ಟೋಫರ್‌ ನೋಲನ್‌ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಸಿಲಿಯನ್ ಮರ್ಫಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಇದೇ ಮೊದಲು. ಹೆಚ್ಚುವರಿಯಾಗಿ, ಅವರು ತಮ್ಮ ಮೊದಲ ನಾಮನಿರ್ದೇಶನದಲ್ಲಿ ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!