ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಂಬಾಳೆ ಫಿಲಮ್ಸ್ ಹೊಸ ಸಿನಿಮಾ ಘೋಷಣೆ ಮಾಡಿದೆ. ನವೆಂಬರ್ 15 ರಂದು ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಹೊಂಬಾಳೆ, ಸಿನಿಮಾದ ಕುರಿತು ಕುತೂಹಲ ಹುಟ್ಟಿಸಿದೆ. ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್ನಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ, ಆದರೆ ಪೋಸ್ಟರ್ ನೋಡಿದವರಿಗೆ ಇದು ಪೌರಾಣಿಕ ಸಿನಿಮಾ ಇರಬಹುದು ಎಂಬ ಅನುಮಾನ ಮೂಡಿದೆ. ಜೊತೆಗೆ ಇದು ಅನಿಮೇಷನ್ ಸಿನಿಮಾ ಆಗಿರಬಹುದೆಂಬ ಅನುಮಾನವೂ ಮೂಡುತ್ತಿದೆ.
ಹೊಂಬಾಳೆ ಈಗ ಹಂಚಿಕೊಂಡಿರುವ ಪೋಸ್ಟರ್ನಲ್ಲಿ ರಕ್ತ ಮೆತ್ತಿದ ಕೈ ಮಾತ್ರವೇ ಕಾಣುತ್ತಿದ್ದು, ಪೌರಾಣಿಕ ಕತೆಯಾದ ನರಸಿಂಹನ ಕೈ ರೀತಿ ಕಾಣುತ್ತಿದೆ. ಚೂಪಾದ ಉಗುರುಗಳು ಜೊತೆಗೆ ಕೈಗೆ ಧರಿಸಿರುವ ಕೆಲವು ಆಭರಣಗಳು ಗಮನ ಸೆಳೆಯುತ್ತಿವೆ. ಪೋಸ್ಟರ್ ಬಿಡುಗಡೆ ಮಾಡಿರುವ ಹೊಂಬಾಳೆ, ‘ನಂಬಿಕೆಗೆ ಸವಾಲು ಬಂದಾಗ ಅವನು ಬರುತ್ತಾನೆ’ ಎಂಬ ಅಡಿಬರಹವನ್ನು ನೀಡಿದೆ. ಸಿನಿಮಾದ ಇತರೆ ಮಾಹಿತಿಯನ್ನು ನಾಳೆ ಅಂದರೆ ನವೆಂಬರ್ 16 ಮಧ್ಯಾಹ್ನ 3:33 ಕ್ಕೆ ಹಂಚಿಕೊಳ್ಳುವುದಾಗಿ ಘೋಷಿಸಿದೆ.
View this post on Instagram