Thursday, December 8, 2022

Latest Posts

ಹೊಂಬಾಳೆ ಫಿಲ್ಮ್ಸ್​ ಮುಂದಿನ ಸಿನಿಮಾ ‘ಧೂಮಂ’; ಫಹಾದ್​ ಫಾಸಿಲ್​- ಪವನ್​ ಕುಮಾರ್​ ಕಾಂಬಿನೇಶನ್‌ ನಲ್ಲಿ ಮೂಡಿಬರಲಿದೆ ಚಿತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆಜಿಎಫ್ ಮತ್ತು ಸಲಾರ್ ನಂತಹ ಬಿಗ್‌ ಬಜೆಟ್‌ ಚಿತ್ರಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ದೊಡ್ಡ ಯೋಜನೆಯನ್ನು ಘೋಷಿಸಿದೆ. ದಕ್ಷಿಣದ ಸ್ಟಾರ್‌ ನಟ ಫಹದ್ ಫಾಸಿಲ್ ಮತ್ತು ಕನ್ನಡದ ಖ್ಯಾತ ನಿರ್ದೇಶಕ ಪವನ್‌ ಕುಮಾರ್‌ ಕಾಂಬಿನೇಶನ್‌ ನಲ್ಲಿ ಚಿತ್ರ ಮೂಡಿಬರಲಿದೆ. ಈ ಚಿತ್ರಕ್ಕೆ ʼಧೂಮಂʼ ಎಂದು ಹೆಸರಿಡಲಾಗಿದ್ದು, ಹೊಂಬಾಳೆ ಫಿಲ್ಮ್ಸ್‌ ಇಂದು ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ಅನ್ನು ಇಂದು (ಸೆ.30) ಅನಾವರಣಗೊಳಿಸಿದೆ.

ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಫಹದ್ ನಟಿಸುತ್ತಿದ್ದಾರೆ ಎಂಬ ವದಂತಿಗಳು ಹಲವು ತಿಂಗಳುಗಳಿಂದ ಹರಿದಾಡುತ್ತಿದ್ದವು. ಲೂಸಿಯಾ, ಯು-ಟರ್ನ್​ ಮೊದಲಾದ ಚಿತ್ರಗಳ ಮೂಲಕ ಪವನ್‌ ಕುಮಾರ್‌ ಗಟ್ಟಿಕಥೆಯ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕ ಎಂದು ಖ್ಯಾತರಾಗಿದ್ದಾರೆ. ಚಿತ್ರದಲ್ಲಿ ಫಹದ್ ಫಾಸಿಲ್ಗೆ ಜೋಡಿಯಾಗಿ ಖ್ಯಾತ ನಟಿ ಅಪರ್ಣಾ ಬಾಲಮುರಳಿ ಕಾಣಿಸಿಕೊಳ್ಳಲಿದ್ದಾರೆ. ಅಪರ್ಣಾ ‘ಸೂರರೈ ಪೋಟ್ರು’ ಸಿನಿಮಾದಲ್ಲಿ ಚಿತ್ರಭಿಮಾನಿಗಳನ್ನು ಮೋಡಿಮಾಡಿದ್ದರು. ಖ್ಯಾತನಟ ರೋಷನ್ ಮ್ಯಾಥ್ಯೂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣವಿದ್ದರೆ, ಪೂರ್ಣಚಂದ್ರ ತೇಜಸ್ವಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ‘ಧೂಮಂ’ ಚಿತ್ರ ಮೂಡಿಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!