ಭಾರತ-ಪಾಕ್‌ ಗಡಿಯಲ್ಲಿ ವೀಕ್ಷಣಾ ಕೇಂದ್ರ ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ನಡಬೆಟ್‌ನಲ್ಲಿ ಭಾರತ-ಪಾಕ್ ಗಡಿ ವೀಕ್ಷಣಾ ಕೇಂದ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸಿದರು.
ಭಾರತ-ಪಾಕ್ ಗಡಿ ಪ್ರದೇಶವಾದ ನಡಬೆಟ್ ಗುಜರಾತ್ ಪ್ರವಾಸೋದ್ಯಮದ ಆಶ್ರಯದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ.

ಭಾರತೀಯ ಗಡಿಯಲ್ಲಿರುವ ಆರ್ಮಿ ಪೋಸ್ಟ್‌ನ ಕಾರ್ಯಕ್ಷಮತೆಯನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು. ಸೂರ್ಯಾಸ್ತದ ಸಮಯದಲ್ಲಿ ಇಲ್ಲಿ ನಡೆಯುವ ಬೀಟಿಂಗ್‌ ರೀಟ್ರೀಟ್ ಸಮಾರಂಭದ ಜೊತೆಗೆ, ಗಡಿ ಕಾಯುವ ಬಿಎಸ್ಎಫ್ ಯೋಧರು ಆಯೋಜಿಸುವ ಪರೇಡ್ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಶಸ್ತ್ರಾಸ್ತ್ರಗಳ ಪ್ರದರ್ಶನ ಮತ್ತು ಸೇನೆಯ ವಿವಿಧ ಗನ್‌ಗಳು, ಟ್ಯಾಂಕ್‌ಗಳು ಮತ್ತು ಇತರ ಸುಧಾರಿತ ಉಪಕರಣಗಳನ್ನು ನಡಬೆಟ್‌ನಲ್ಲಿ ಪ್ರದರ್ಶಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!