Thursday, September 29, 2022

Latest Posts

ಉಮೇಶ್ ಕತ್ತಿ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ..

ಹೊಸದಿಗಂತ ವರದಿ ತುಮಕೂರು:‌ 

ರಾಜ್ಯದ ಅರಣ್ಯ ಹಾಗೂ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಯವರ ದಿಢೀರ್ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೂ ಹಾಗೂ ಸಂಪುಟ ಸಹೋದ್ಯೋಗಿಯೂ ಆಗಿದ್ದ ಉಮೇಶ್ ಕತ್ತಿಯವರ ದಿಢೀರ್ ನಿಧನದ ಸುದ್ದಿ ತಿಳಿದು, ದಿಗ್ಭ್ರಮೆಗೊಂಡಿರುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರುಗಳಲ್ಲಿ ಒಬ್ಬರಾಗಿದ್ದ, ಅತ್ಯಂತ ಅನುಭವಿ ಹಾಗೂ ಉತ್ಸಾಹಿ ರಾಜಕಾರಣಿಯಾಗಿದ್ದ ಹಾಗೂ ಉತ್ತರ ಕರ್ನಾಟಕ ಭಾಗದ ಜನತೆಯ ದ್ವನಿಯಾಗಿದ್ದ ಉಮೇಶ್ ಕತ್ತಿಯವರ ನಿಧನದಿಂದ ರಾಜ್ಯಕ್ಕೆ ಅದರಲ್ಲಿಯೂ ವಿಶೇಷವಾಗಿ, ಉತ್ತರ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

ದಿವಂಗತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ, ಎಂದು ಪ್ರಾರ್ಥಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!