ಹೊಸದಿಗಂತ ಡಿಜಿಟಲ್ ಡೆಸ್ಕ್
ಆಮಶಂಕೆಯಂತಹ ಖಾಯಿಲೆ ನಿಮ್ಮನ್ನು ಬಾಧಿಸುತ್ತಿದ್ದರೆ ಈ ತಂಬ್ಳಿ ಮಾಡಿ ಸೇವಿಸಿ ಅರಾಮಾಗಬಹುದು.
ಬೇಕಾಗುವ ಸಾಮಾಗ್ರಿ:
ಓಮದ ಕಾಳು, ಒಣ ಶುಂಠಿ, ಕಾಯಿ ತುರಿ, ಮಜ್ಜಿಗೆ, ಉಪ್ಪು
ಮಾಡುವ ವಿಧಾನ:
ಓಮದ ಕಾಳು, ಮತ್ತು ಜಜ್ಜಿದ ಒಣಶುಂಠಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಸ್ವಲ್ಪ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಕರಿಬೇವು ಹಾಗೂ ಇಂಗು ಹಾಕಿ ಒಗ್ಗರಣೆ ಕೊಡಿ. ಹೊಟ್ಟೆ ನೋವು, ಹೊಟ್ಟೆ ಉಬ್ಬರ , ಆಮಶಂಕೆ ನಿವಾರಣೆಗೆ ಇದು ಮನೆ ಮದ್ದು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ