FOOD | ಮನೆಯಲ್ಲೇ ಮಾಡ್ಬೋದು ಪೀನಟ್‌ ಬಟರ್‌, ಬೇಕಿರೋದು ನಾಲ್ಕೇ ಸಾಮಾಗ್ರಿ..

ಸಾಮಾಗ್ರಿಗಳು

ಶೇಂಗಾ ಬೀಜ
ಜೇನುತುಪ್ಪ
ಉಪ್ಪು
ಕಡಲೆಕಾಯಿ ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಶೇಂಗಾ ಬೀಜ ಹಾಕಿಕೊಂಡು ಕೆಂಪಗಾಗುವರೆಗೆ ಹುರಿದುಕೊಳ್ಳಿ. ಬಳಿಕ ತಣ್ಣಾಗಗಲು ಬಿಡಿ.
ನಂತರ ಸಿಪ್ಪೆ ತೆಗೆದುಕೊಳ್ಳಿ
ಮಿಕ್ಸಿ ಜಾರಿಗೆ ಶೇಂಗಾ ಬೀಜವನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
ನಂತರ ಇದಕ್ಕೆ 1 ಚಮಚ ಜೇನುತುಪ್ಪ, ಒಂದು ಚಿಟಿಕೆ ಉಪ್ಪನ್ನು ಹಾಕಿಕೊಳ್ಳಿ. ಬಳಿಕ ಮತ್ತೊಂದು ಬಾರಿ ರುಬ್ಬಿಕೊಳ್ಳಿ.
ಈಗ ಈ ಮಿಶ್ರಣಕ್ಕೆ ಒಂದು ಚಮಚ ಕಡಲೆಕಾಯಿ ಎಣ್ಣೆ ಹಾಕಿಕೊಳ್ಳಿ. ಬಳಿಕ ಇನ್ನೊಂದು ಬಾರಿ ರುಬ್ಬಿಕೊಳ್ಳಿ.
ಮಿಕ್ಸಿ ಜಾರಿನಲ್ಲಿದ್ದ ಮಿಶ್ರಣವನ್ನು ಒಂದು ಬೌಲ್‌ಗೆ ತೆಗೆದಿಟ್ಟುಕೊಳ್ಳಿ.
ಇದನ್ನು ಬ್ರೆಡ್‌, ಆಪಲ್‌, ಚಪಾತಿ ಜೊತೆ ಸೇವಿಸಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!