ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಡಿಗೆ ಹಣದ ವಿಚಾರವಾಗಿ ಉಂಟಾದ ಗಂಭೀರ ವಿವಾದವೊಂದು ಗಾಜಿಯಾಬಾದ್‌ನಲ್ಲಿ ಭೀಕರ ಹತ್ಯೆಗೆ ಕಾರಣವಾಗಿದೆ. ರಾಜನಗರದ ಔರಾ ಚಿಮೆರಾ ಸೊಸೈಟಿಯಲ್ಲಿ ವಾಸವಿದ್ದ ಮಹಿಳೆ ತನ್ನದೇ ಬಾಡಿಗೆದಾರರ ಕೈಯಲ್ಲಿ ಕ್ರೂರವಾಗಿ ಹತ್ಯೆಯಾಗಿದ್ದು, ಆಕೆಯ ಶವವನ್ನು ತುಂಡು ಮಾಡಿ ಸೂಟ್‌ಕೇಸ್‌ನಲ್ಲಿ ಅಡಗಿಸಿರುವುದು ಪತ್ತೆಯಾಗಿದೆ. ಈ ಘಟನೆ ಇಡೀ ಸೊಸೈಟಿಯನ್ನೇ ಬೆಚ್ಚಿಬೀಳಿಸಿದೆ.
ಮೃತ ಮಹಿಳೆ ದೀಪ್ ಶಿಖಾ ಶರ್ಮಾ ಅವರು ಡಿಸೆಂಬರ್ 17ರ ಸಂಜೆ ಬಾಡಿಗೆ ಸಂಗ್ರಹಕ್ಕಾಗಿ ಫ್ಲಾಟ್‌ಗೆ ತೆರಳಿದ್ದರು. ಆ ಬಳಿಕ ಅವರು ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಅನುಮಾನ ಉಂಟಾಯಿತು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಅವರು ಫ್ಲಾಟ್‌ಗೆ ಪ್ರವೇಶಿಸಿರುವುದು ಕಂಡುಬಂದರೂ, ಹೊರಬಂದ ದೃಶ್ಯಗಳು ಲಭ್ಯವಾಗಿರಲಿಲ್ಲ. ಅನುಮಾನ ಗಟ್ಟಿಯಾಗುತ್ತಿದ್ದಂತೆ ಸೊಸೈಟಿ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

