Tuesday, January 27, 2026
Tuesday, January 27, 2026
spot_img

ಬೆಂಗಳೂರಿನ ಮನೆ ಓನರ್‌ಗಳೇ ಇದನ್ನು ಮಿಸ್‌ ಮಾಡದೇ ಓದಿ.. ಈ ರೂಲ್ಸ್‌ ಫಾಲೋ ಆಗ್ಲೇಬೇಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ ಮನೆಗಳನ್ನು ಬಾಡಿಗೆಗೆ ನೀಡುವ ಮುನ್ನ ಹಲವು ನಿಯಮಗಳನ್ನು ಪಾಲಿಸಲೇಬೇಕಿದೆ.

ಮಾದಕ ಪದಾರ್ಥಗಳ ಸಂಗ್ರಹ ಮತ್ತು ಮಾರಾಟ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ವಿದೇಶಿಗರ ಕೈವಾಡ ಕಂಡುಬರುತ್ತಿದೆ. ಈ ವಿದೇಶಿಗರು ಎಲ್ಲಿ ಉಳಿದುಕೊಳ್ತಿದ್ದಾರೆ, ಬಾಡಿಗೆ ಮನೆಯಲ್ಲಿ ಇರುತ್ತಿದ್ದಾರೆಯೇ ಎಂದು ಸರ್ಕಾರ ಚಿಂತಿಸಿದೆ.

ಈಶಾನ್ಯ ಹಾಗೂ ಪೂರ್ವ ವಿಭಾಗದಲ್ಲಿನ ಮನೆಗಳ ಮಾಲೀಕರಿಗೆ ಸಾರ್ವಜನಿಕ ಪ್ರಕಟಣೆ ಮೂಲಕ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ವಿದೇಶಿಗರ ಕಾಯ್ದೆಯ ಅನುಸಾರ ಭಾರತೀಯ ವಿದೇಶಿಗರ ಕಾಯ್ದೆಯ ಅನುಸಾರ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆ ನೀಡುವ ಮಾಲೀಕರು ಅವರ ವಿವರಗಳನ್ನು ಪಡೆಯಬೇಕು ನಂತರ ಇದನ್ನು 24 ಗಂಟೆಗೊಳಗಾಗಿ Indianfrro.gov.inನಲ್ಲಿ ಸಲ್ಲಿಸಬೇಕಿದೆ.

ಬಳಿಕ ಎಫ್ಆರ್‌ಆರ್‌ಓನಿಂದ ಸಿ-ಫಾರ್ಮ್ ಪಡೆದು ಸ್ಥಳೀಯ ಠಾಣೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಈ ನಿಯಮ ಉಲ್ಲಂಘಿಸಿ ಮನೆಗಳನ್ನು ಬಾಡಿಗೆಗೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !