ಹೊಸದಿಗಂತ ವರದಿ,ಅಂಕೋಲಾ:
ಕ್ಷತ್ರಿಯ ಕೋಮಾರಪಂಥ ಸಮಾಜದ ಸಾಂಪ್ರದಾಯಿಕ ಹೊಂಡೆ ಉತ್ಸವ ನವೆಂಬರ್ 14 ರಂದು ದೀಪಾವಳಿ ಬಲಿಪಾಡ್ಯಮಿ ದಿನದಂದು ನಡೆಯಲಿದ್ದು ಉತ್ಸವದ ಕರಪತ್ರವನ್ನು ಪಟ್ಟಣದ ವೆಂಕಟರಮಣ ದೇವಸ್ಥಾನದಲ್ಲಿ ಹೊಂಡೆ ಉತ್ಸವ ಸಮಿತಿಯ ಅಧ್ಯಕ್ಷ ಸಂಜಯ ನಾಯ್ಕ, ಗೌರವಾಧ್ಯಕ್ಷ ವಿಜಯಕುಮಾರ್ ನಾಯ್ಕ, ಅಖಿಲ ಕೋಮಾರಪಂಥ ಹೊಂಡೆಯಾಟ ಸಮಿತಿ ಅಧ್ಯಕ್ಷ ಕಾರ್ತಿಕ ನಾಯ್ಕ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನಡೆಸಲಾದ ಸುದ್ದಿ ಗೋಷ್ಠಿ ಯಲ್ಲಿ ಹೊಂಡೆ ಉತ್ಸವ ಸಮಿತಿಯ ಅಧ್ಯಕ್ಷ ಸಂಜಯ ನಾಯ್ಕ ಮಾತನಾಡಿ ಪುರಾತನ ಯುದ್ಧಕಲೆಯ ಪ್ರತೀಕವಾಗಿ ಕೋಮಾರಪಂಥ ಸಮಾಜ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಹೊಂಡೆಯಾಟ ನಡೆಸುತ್ತ ಬಂದಿದ್ದು ಈ ಬಾರಿ ಆಕರ್ಷಕ ಶೋಭಾಯಾತ್ರೆಯೊಂದಿಗೆ ನಡೆಯಲಿರುವ ಉತ್ಸವಕ್ಕೆ ಸಮಾಜ ಭಾಂದವರು ಮತ್ತು ಎಲ್ಲಾ ಸಮಾಜದವರು ಸಹಕಾರ ನೀಡಬೇಕು ಎಂದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷ ವಿಜಯಕುಮಾರ್ ನಾಯ್ಕ ಮಾತನಾಡಿ ಬಹಳ ಹಿಂದಿನ ಕಾಲದಿಂದಲೂ ಕೋಮಾರಪಂಥ ಸಮಾಜದ ಹೊಂಡೆಯಾಟ ಕ್ಷತ್ರಿಯ ಪರಂಪರೆಯ ದ್ಯೋತಕವಾಗಿ ನಡೆಯುತ್ತ ಬಂದಿದ್ದು ಇದೀಗ ಒಂದು ಉತ್ಸವದಂತೆ ವಿಶೇಷ ಆಕರ್ಷಣೆಗಳೊಂದಿಗೆ ನಡೆಸುವ ಮೂಲಕ ಹೊಸ ಮೆರಗನ್ನು ನೀಡಲಾಗುತ್ತಿದೆ, ವಿವಿಧ ಬಗೆಯ ಕಲಾ ಪ್ರದರ್ಶನ ಒಳಗೊಂಡ ಭವ್ಯ ಮೆರವಣಿಗೆಯೊಂದಿಗೆ ಹೊಂಡೆಯಾಟ ನಡೆಯಲಿದೆ ಎಂದರು.
ಹೊಂಡೆ ಉತ್ಸವ ಸಮಿತಿಯ ಕಾರ್ಯದರ್ಶಿ ಗಣೇಶ ನಾಯ್ಕ , ಹೊಂಡೆಯಾಟ ಸಮಿತಿಯ ಅಧ್ಯಕ್ಷ ಕಾರ್ತಿಕ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ
ಪ್ರಮುಖರುಗಳಾದ ವಿಕ್ರಮ ಪಂಥ, ಸೋಮೇಶ್ವರ ನಾಯ್ಕ, ಜಾನು ನಾಯ್ಕ, ರಾಮದಾಸ ನಾಯ್ಕ, ರಾಜು ನಾಯ್ಕ, ದೀಪಕ ನಾಯ್ಕ, ಶ್ರೀನಿವಾಸ ರಾಮನಾಥಕರ್, ಅಮರ ನಾಯ್ಕ, ನಾಗೇಂದ್ರ ನಾಯ್ಕ, ದೇವರಾಜ ನಾಯ್ಕ, ಅಶೋಕ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.