ಹೆಜ್ಜೇನು ದಾಳಿ: ಆರು ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಹೊಸದಿಗಂತ ಮುಂಡಗೋಡ:

ಜೇನು ಹುಳುಗಳು ಆರು ಜನರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅದರಲ್ಲಿ ಮೂರು ಜನರಿಗೆ ಗಂಭೀರ ಗಾಯಗೊಂಡರೆ ಇನ್ನೂ ಮೂರು ಜನರಿಗೆ ಕೈ ಕಾಲು ಮುಖ ಹಾಗೂ ಮೈಗೆ ಕಚ್ಚಿ ಗಾಯಪಡಿಸಿದ ಘಟನೆ ಪಟ್ಟಣದ ನೆಹರು ನಗರದಲ್ಲಿ ಶನಿವಾರ ನಡೆದಿದೆ.

ನೆಹರು ನಗರದ ಬಡಾವಣೆಯ ಗಿಡವೊಂದರಲ್ಲಿ ಜೇನು ಹುಳಗಳು ಗೂಡು ಕಟ್ಟಿತ್ತು. ಮಧ್ಯಾಹ್ನದ ಬಿಸಿಲಿನ
ತಾಪಕ್ಕೋ ಅಥವಾ ಯಾರೋ ಕಿಡಿಗೇಡಿಗಳು ಕಲ್ಲೆಸೆದ ಕಾರಣಕ್ಕೆ ಜೇನು ಹುಳಗಳು ಅಕ್ಕ ಪಕ್ಕದಲ್ಲಿದ್ದ ಆರು ಜನರಿಗೆ ಜೇನು ಹುಳಗಳು ತಲೆ, ಮೈ-ಕೈ ಮೇಲೆ ಕಚ್ಚಿವೆ. ತೀವ್ರ ಅಸ್ವಸ್ಥಗೊಂಡವರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅನೀಲ ಕೊಟಗೊಣಸಿ, ಮಮ್ತಾಜ್ ಪೊಕಾಕಿ, ದಾದಾಪೀರ ಪೋಕಾಕಿ,ಅಕ್ತರ್ ರಜಾ ಜೇನುನಿಂದ ದಾಳಿಗೊಳಗಾದವರಾಗಿದ್ದಾರೆ. ತಾಲೂಕಿನಲ್ಲಿ ಜೇನು ಹುಳಗಳ ದಾಳಿ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನವಸತಿ ಪ್ರದೇಶದಲ್ಲಿ ಜೇನು
ಗೂಡುಗಳನ್ನು ಪತ್ತೆಹಚ್ಚಿ ತೆರವು ಕಾರ್ಯಚರಣೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!