ಹಾಂಗ್ಯೋ ಮೋದಕ್ ಐಸ್‌ಕ್ರೀಂ ಮಾರುಕಟ್ಟೆಗೆ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಪಡೆದ ಮಂಗಳೂರು ಮೂಲದ ಹಾಂಗ್ಯೋ ಐಸ್‌ಕ್ರೀಂ ಕಂಪನಿಯು ಹೊಸ ಉತ್ಪನ್ನ ಮೋದಕ್ ಐಸ್‌ಕ್ರೀಮ್ ಅನ್ನು ಬೆಂಗಳೂರಿನ ಕಾಶಿಮಠ ಮಲ್ಲೇಶ್ವರಂನಲ್ಲಿ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವದಿಸಿ, ಲೋಕಾರ್ಪಣೆ ಮಾಡಿದರು.

ಸಾಂಪ್ರದಾಯಿಕ ರುಚಿಯನ್ನು ಐಸ್‌ಕ್ರೀಂ ಮೂಲಕ ನೀಡುವ ಉದ್ದೇಶದಿಂದ ಮೋದಕ್ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗಿದೆ. ಬೆಲ್ಲ, ತೆಂಗಿನಕಾಯಿ, ಏಲಕ್ಕಿ ಮತ್ತು ಜೈಫಾಲ್‌ನ ಮಿಶ್ರಣದಿಂದ ಕೂಡಿರುವ ಕೆನೆ ಐಸ್‌ಕ್ರೀಂ ಇದಾಗಿದೆ.ಮುಂದಿನ ದಿನಗಳಲ್ಲಿ ಹಬ್ಬಕ್ಕೆ ಪೂರಕವಾಗಿ ಇದನ್ನು ಬಿಡುಗಡೆಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಪೈ ಮತ್ತು ವ್ಯವಹಾರ ಅಭಿವೃದ್ಧಿ ಪ್ರಬಂಧಕ ರಾಕೇಶ್ ಕಾಮತ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!