ದಿನಭವಿಷ್ಯ | ಬಾಕಿ ಉಳಿಸಿಕೊಂಡ ಕಾರ್ಯಗಳನ್ನು ಮುಗಿಸಲು ಪ್ರಶಸ್ತ ದಿನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಧಾರ್ಮಿಕ ವಿಚಾರ ಗಳಲ್ಲಿ ಆಸಕ್ತಿ. ಮಾನಸಿಕ ಶಾಂತಿಗೆ ತುಡಿಯುವಿರಿ. ಕೆಲವು ಸಮಸ್ಯೆಗಳಿಗೆ ಇಂದು ಅಚಾನಕ್ ಪರಿಹಾರ ಒದಗಲಿದೆ. ಕೌಟುಂಬಿಕ ಸಹಕಾರ.

ವೃಷಭ
ಗತಕಾಲದ ಕೆಲವು ವಿಷಯಗಳನ್ನು ಇತ್ಯರ್ಥ ಪಡಿಸಲು ಸಫಲ. ನಿಮ್ಮ ಬದುಕಿನ ಮೇಲೆ ಪೂರ್ಣ ನಿಯಂತ್ರಣ. ಪ್ರೀತಿಪಾತ್ರರಿಂದ ನಿಮ್ಮ ಇಷ್ಟಾರ್ಥ ಸಿದ್ಧಿ.

ಮಿಥುನ
ಹಠವಾದಿ ಹಾಗೂ ಬಿರುಸಿನ ವರ್ತನೆ ತೋರುತ್ತೀರಿ. ಆದರೆ ಸಮಾಧಾನದಿಂದ ವರ್ತಿಸುವುದರಲ್ಲಿ ನಿಮ್ಮ ಹಿತವಿದೆ. ಸಹನೆಯನ್ನು ಕಾಪಾಡಿ.

ಕಟಕ
ಆರಂಭದಲ್ಲಿ ಯಾವುದೂ ನೀವು ಬಯಸಿದಂತೆ ಸಾಗಲಾರದು. ಹತಾಶೆ ಬೇಡ, ಬಳಿಕ ಎಲ್ಲವೂ ನಿಮ್ಮ ಇಚ್ಛೆಯಂತೆ ನೆರವೇರುವುದು.

ಸಿಂಹ
ಕಠಿಣ ಸವಾಲು ಎದುರಿಸುವಿರಿ. ನಿಮಗೆ ವಿಶೇಷವೆನಿಸಿದ ವ್ಯಕ್ತಿಯಿಂದ ನೆರವು ಒದಗುವುದು. ನಿಮ್ಮ ಬುದ್ಧಿಮತ್ತೆಯಿಂದ ಸಮಸ್ಯೆಯಿಂದ ಮುಕ್ತಿ.

ಕನ್ಯಾ

ಹಳೆಯ ಸಮಸ್ಯೆಗಳು ನಿವಾರಣೆಯಾಗಿ ನಿರಾಳತೆ. ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಮನೋದಾರ್ಢ್ಯ ಮತ್ತು ಸಹನೆ ಕಳಕೊಳ್ಳದಿರಿ. ಕೌಟುಂಬಿಕ ನೆಮ್ಮದಿ.

ತುಲಾ
ಖಾಸಗಿ ಮತ್ತು ವೃತ್ತಿ ಸಮಸ್ಯೆಗಳಿಂದಾಗಿ ಗೊಂದಲದ ಮನಸ್ಥಿತಿ. ಹೊಣೆ ನಿಭಾಯಿಸಲು ವಿಫಲ. ವೃತ್ತಿ ಮತ್ತು ಕುಟುಂಬದ ಮಧ್ಯೆ ಸಮತೋಲನ ಸಾಧಿಸಿ.

ವೃಶ್ಚಿಕ
ಉತ್ಸಾಹದ ಮನಸ್ಥಿತಿ. ಕಾರ್ಯದಲ್ಲಿ ಯಶಸ್ಸು.ಕೆಲವರ ಪಾಲಿಗೆ ನೀವು ಆದರ್ಶ ವ್ಯಕ್ತಿಯಾಗಿ ತೋರಿಬರುವಿರಿ. ಕೌಟುಂಬಿಕ ಸಮಾಧಾನ, ಸಹಕಾರ.

ಧನು
ಬಾಕಿ ಉಳಿದ ಕಾರ್ಯ ಮುಗಿಸಲು ಸೂಕ್ತ ದಿನ. ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಕೆಲವು ಸಮಸ್ಯೆಗೆ ಪರಿಹಾರ ದೊರಕಲಿದೆ.

ಮಕರ
ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿ. ಯಾವುದಕ್ಕೂ ಅವಸರದ ತೀರ್ಮಾನ ತಾಳದಿರಿ. ಅನಿರೀಕ್ಷಿತ ಸಹಕಾರ, ನೆರವು ನಿಮಗೆ ಒದಗುವುದು.

ಕುಂಭ
ವೃತ್ತಿಯಲ್ಲಿ ತಪ್ಪು ಸಂಭವಿಸಬಹುದು. ಏಕಾಗ್ರತೆ ಮೂಡದೇ ಇರಬಹುದು. ಪ್ರಮುಖ ವಿಷಯಗಳನ್ನು ಗಮನವಿಟ್ಟು ನಿಭಾಯಿಸಿ.

ಮೀನ
ಹೊಸ ವ್ಯವಹಾರ ಆರಂಭಿಸಲು ಸೂಕ್ತ ಕಾಲ. ಆಪ್ತರ ಜತೆ ಸಂವಹನ ಕೊರತೆಯಿಂದ ಭಿನ್ನಾಭಿಪ್ರಾಯ ಉಂಟಾದೀತು.27

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!