ದಿನಭವಿಷ್ಯ | ವೃತ್ತಿಗೆ ಸಂಬಂಧಿಸಿ ಆತುರದ ತೀರ್ಮಾನ ತೆಗೆದುಕೊಳ್ಳಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ನಿಮ್ಮ ಕಾರ್ಯದಲ್ಲಿ ಸಣ್ಣಪುಟ್ಟ ಅಡ್ಡಿಗಳು ಬರಬಹುದು. ಅಧೀರರಾಗದಿರಿ. ಕೊನೆಗೆ ಎಲ್ಲವೂ ನಿರಾಳವಾಗುವುದು. ಕೌಟುಂಬಿಕ ಸಮಾಗಮ.

ವೃಷಭ
ಕೇವಲ ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಕಾರ್ಯ ಸಾಧ್ಯವಾಗಬೇಕಾದರೆ ನಿರ್ವಹಣೆಯೂ ಮುಖ್ಯ. ಆರೋಗ್ಯದಲ್ಲಿ ತುಸು ಏರುಪೇರು.

ಮಿಥುನ
ವೃತ್ತಿಗೆ ಸಂಬಂಧಿಸಿ ಆತುರದ ತೀರ್ಮಾನ ತೆಗೆದುಕೊಳ್ಳಬೇಡಿ. ಇತರರ ಜತೆ ಸಮಾಲೋಚಿಸಿ. ನಿಮ್ಮ ಕಾರ್ಯಕ್ಕೆ ಕೆಲವರಿಂದ ವಿರೋಧ ಬಂದೀತು.

ಕಟಕ
ಯಾರದೇ ಮಾತಿಗೆ ಆತುರದಿಂದ ಪ್ರತಿಕ್ರಿಯಿಸದಿರಿ. ಅದು ಸಂಘರ್ಷಕ್ಕೆ ಕಾರಣ ಆಗಬಹುದು. ವದಂತಿ, ಚಾಡಿ ಮಾತುಗಳಿಗೆ ಕಿವಿಗೊಡದಿರಿ.

ಸಿಂಹ
ಏಕತಾನತೆಯಿಂದ ಹೊರಬಂದು ಹೊಸದನ್ನು ಮಾಡುವ ಉದ್ದೇಶ ನಿಮ್ಮದು. ಮತ್ತೇಕೆ ತಡ, ಮುಂದುವರಿಯಿರಿ. ಹಿಂಜರಿಕೆ ಬಿಟ್ಟುಬಿಡಿ.

ಕನ್ಯಾ
ಕಾಲಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಿ. ಆಹಾರದಲ್ಲಿ ಡಯಟ್ ಕಾಪಾಡಿ. ಆತ್ಮೀಯ ಸಂಬಂಧದ ಮಧ್ಯೆ ಬಿರುಕು ಉಂಟಾದೀತು.  ವಿವೇಕವಿರಲಿ.

ತುಲಾ
ಹಳೆಯ ವಿಷಯಗಳಿಗೆ ಇನ್ನೂ ಕೊರಗುತ್ತಾ ಕೂರಬೇಡಿ. ಅದನ್ನು ಮರೆತು ಹೊಸದಾರಿ ಹುಡುಕಿಕೊಳ್ಳಿ. ನಿಮ್ಮ ಆಪ್ತರ ಬೆಂಬಲ, ಪ್ರೀತಿ ನೆನಪಿಸಿಕೊಳ್ಳಿ.

ವೃಶ್ಚಿಕ
ನಿಮಗೇ  ಅಚ್ಚರಿ ಯಾಗುವ ರೀತಿಯಲ್ಲಿ ಇಂದು ಅಧಿಕ ಕೆಲಸ ನಿರ್ವಹಿಸುವಿರಿ. ಪ್ರತಿಕೂಲ ಪರಿಸ್ಥಿತಿ ನಿಮಗೆ ಪೂರಕವಾಗಿ ಬದಲಾಗಲಿದೆ.

ಧನು
ಬಾಕಿ ಇರುವ ಕಾರ್ಯ ಪೂರೈಸುವಿರಿ. ಹೊಸ ಉತ್ಸಾಹ ತುಂಬಿಕೊಳ್ಳುವುದು. ಪ್ರೀತಿಪಾತ್ರರ ಸಂಗದಲ್ಲಿ ದಿನವು ಸುಗಮವಾಗಿ ಸಾಗುವುದು.

ಮಕರ
ಸಹಜವಾಗಿ ಸಾಗುವ ದಿನವು ಸಂಜೆ ವೇಳೆಗೆ ಭಾರೀ ಬದಲಾವಣೆಗೆ ಕಾರಣವಾದೀತು. ಮಹತ್ವದ ಘಟನೆ ಸಂಭವಿಸಬಹುದು. ಮಾನಸಿಕ ಒತ್ತಡ.

ಕುಂಭ
ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆರೋಗ್ಯ ಸಮಸ್ಯೆ ನಿವಾರಣೆ. ಮನಸ್ಸಿಗೆ ನಿರಾಳತೆ. ಒಟ್ಟಿನಲ್ಲಿ ಇಂದು ನಿಮ್ಮ ಪಾಲಿಗೆ ತೃಪ್ತಿಕರ ದಿನ.

ಮೀನ
ಸಂಬಂಧವನ್ನು ಸರಿಯಾಗಿ ಕಾಪಾಡಲು ಕಷ್ಟಪಡುವಿರಿ. ಆತ್ಮೀಯರ ಭಾವನೆ ಅರ್ಥ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯ ಹೇರಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!