ದಿನಭವಿಷ್ಯ| ಈ ರಾಶಿಯವರಿಗೆ ಇಂದು ಹಣಕಾಸಿನ ಕೊರತೆಯುಂಟಾಗಬಹುದು

ಮೇಷ
ಫಲಪ್ರದ ದಿನ. ಆತ್ಮವಿಶ್ವಾಸ ಹೆಚ್ಚಿ ಸುವ ಬೆಳವಣಿಗೆ. ಕಷ್ಟವೆಂದು ಕೊಂಡಿದ್ದ ಕಾರ್ಯವೊಂದು ಸುಲಭದಲ್ಲಿ ಮುಗಿಯಲಿದೆ.

ವೃಷಭ
ಆರ್ಥಿಕ ಸ್ಥಿತಿ ತೃಪ್ತಿಕರವೆನಿಸಲಿದೆ. ಉಳಿತಾಯದ ಅವಕಾಶವೂ ಲಭ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ.

ಮಿಥುನ
ಸಂಗಾತಿ ಜತೆಗಿನ ವಿರಸವನ್ನು ಪರಿಹರಿಸಿಕೊಳ್ಳುವಿರಿ. ಹಣಕಾಸು ಸ್ಥಿತಿ ಉತ್ತಮಗೊಳ್ಳಲಿದೆ. ದೈಹಿಕ ಮತ್ತು ಮಾನಸಿಕ ನೆಮ್ಮದಿ.

ಕಟಕ
ನಿಮ್ಮ ಕ್ಷಿಪ್ರ ನಿರ್ಧಾರ, ಕ್ಷಿಪ್ರ ಕಾರ್ಯದಿಂದ ಒಳಿತಾಗಲಿದೆ. ಸಂಭಾವ್ಯ ಸಮಸ್ಯೆ ಪರಿಹಾರ ಕಾಣಲಿದೆ. ಇತರರ ಸಹಕಾರ ಪಡೆಯಲು ಸಫಲರಾಗುವಿರಿ.

ಸಿಂಹ
ಕೆರಿಯರ್‌ಗೆ ಸಂಬಂಧಿಸಿ ಉತ್ತಮ ಅವಕಾಶಗಳು ಒದಗಲಿವೆ. ವೃತ್ತಿಯಲ್ಲಿ ನಿಮಗೆ ಅನುಕೂಲ ಕರವಾದ ಬೆಳವಣಿಗೆ. ವೃತ್ತಿಯಲ್ಲಿನ ಬಿಕ್ಕಟ್ಟು  ಪರಿಹರಿಸುವಿರಿ.

ಕನ್ಯಾ
ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ದಿನ. ಎಲ್ಲವೂ ನಿಮಗೆ ಅನುಕೂಲಕರವಾಗಿ ನಡೆಯುವುದು. ಪ್ರೀತಿಪಾತ್ರರ ಜತೆ ಸಮಯ ಕಳೆಯುವಿರಿ.

ತುಲಾ
ಕೆಲಸಗಳನ್ನು ಸರಿಯಾಗಿ ಯೋಜಿಸಿ ಮುಂದುವರಿಸಿ. ಕೆಲವೊಂದು ಅಡ್ಡಿಗಳು ಉಂಟಾಗಬಹುದು. ಹಣಕಾಸು ಕೊರತೆ ಕಾಡಬಹುದು.

ವೃಶ್ಚಿಕ
ಹೆಚ್ಚಿನ ವಿಶೇಷಗಳಿಲ್ಲದ ದಿನ. ಕೌಟುಂಬಿಕ ಹೊಣೆಗಾರಿಕೆ ತುಸು ಹೆಚ್ಚಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸು ವುದು. ದೈಹಿಕ ಸಮಸ್ಯೆ ನಿವಾರಣೆ.

ಧನು
ಮಾನಸಿಕ ಒತ್ತಡ. ಇದರಿಂದಾಗಿ ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗ ಬಹುದು. ಸಂಗಾತಿಯ ಜತೆಗೆ ಭಿನ್ನಮತ ಉಂಟಾಗಬಹುದು. ಸಹನೆ ಜತೆಗಿರಲಿ.

ಮಕರ
ಆರಾಮವಾಗಿ ಇರಲು ಇಂದಿನ ದಿನ ಅವಕಾಶ ನೀಡುವುದಿಲ್ಲ. ಏನಾದರೊಂದು ಕಿರಿಕಿರಿ ಬಾಧಿಸಬಹುದು. ಗುರಿ ಸಾಧಿಸಲು ಧೈರ್ಯದ ಕೊರತೆಯೂ ಇದೆ.

ಕುಂಭ
ಕೆಲಸದಲ್ಲಿ ಪ್ರಗತಿ. ನಿಮ್ಮ ನಿರ್ವಹಣೆಯನ್ನು ಮೇಲಧಿಕಾರಿಗಳು ಗುರುತಿಸುತ್ತಾರೆ. ಇತರರ ಪ್ರೋತ್ಸಾಹವನ್ನು ಪಡೆಯುವಿರಿ. ಕೌಟುಂಬಿಕ ನೆಮ್ಮದಿ.

ಮೀನ
ನಿಮ್ಮ ಹೊಣೆಯನ್ನು ಸಮರ್ಥವಾಗಿ,  ಕ್ಷಿಪ್ರವಾಗಿ ನಿಭಾಯಿಸುವಿರಿ. ಹಾಗಾಗಿ ಯಾವುದೇ ಸಮಸ್ಯೆ ಉದ್ಭವಿಸದು. ಸಾಂಸಾರಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!