ದಿನಭವಿಷ್ಯ | ಇತರರು ಸೃಷ್ಟಿಸಿದ ಸಮಸ್ಯೆಯಲ್ಲಿ ನೀವು ಸಿಕ್ಕಿಬೀಳುವ ಸಂಭವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಕೆಲವರದ್ದು ತೋರಿಕೆಯ ಸ್ನೇಹ ಎಂಬ ಅರಿವು ನಿಮಗಾಗಲಿದೆ. ಅದರಿಂದ ಖಿನ್ನರಾಗದಿರಿ. ಆಗುವುದೆಲ್ಲ ಒಳ್ಳೆಯದಕ್ಕೆ.

ವೃಷಭ
ವೃತ್ತಿಗೆ ಸಂಬಂಧಿಸಿ ಇಂದು ಮಹತ್ವದ ಬೆಳವಣಿಗೆ. ನಿಮಗೆ ಅನುಕೂಲ ಪರಿಸ್ಥಿತಿ ಏರ್ಪಡುವುದು. ಆರ್ಥಿಕ ಬಿಕ್ಕಟ್ಟು ನಿವಾರಣೆ.

ಮಿಥುನ
ತಪ್ಪುಗ್ರಹಿಕೆಯಿಂದ ಆತ್ಮೀಯ ಸಂಬಂಧ ಹಾಳಾಗಬಹುದು. ಆದಕ್ಕೆ ಆಸ್ಪದ ನೀಡದಿರಿ. ಮುಕ್ತ ಮಾತುಕತೆ ಇದಕ್ಕೆ ಪರಿಹಾರ. ಆರ್ಥಿಕ ಒತ್ತಡ ಹೆಚ್ಚು.

ಕಟಕ
ಉದ್ಯೋಗದಲ್ಲಿ ಅಧಿಕ ಒತ್ತಡ. ಆದರೂ ಸಮಯಮಿತಿಯಲ್ಲಿ ಕೆಲಸ ಪೂರೈಸಿ ಸಂತುಷ್ಟರಾಗುವಿರಿ. ಆದರೆ ಕೌಟುಂಬಿಕ ಒತ್ತಡ ಅಸಹನೀಯ.

ಸಿಂಹ
ಹಲವಾರು ಬಗೆಯ ಒತ್ತಡಗಳು. ಕೆಲವರ ವರ್ತನೆ ಅಸಹನೀಯವೆ ನಿಸುವುದು. ಕುಟುಂಬ ಸ್ಥರ  ಸಂಗದಲ್ಲಿ ಮಾನಸಿಕ ಒತ್ತಡ ಕಡಿಮೆಯಾದೀತು.

ಕನ್ಯಾ
ಹಳೆಯದನ್ನು ಮರೆತುಬಿಡಿ, ತಪ್ಪು ಕಲ್ಪನೆ ನಿವಾರಿಸಿ. ಇದು ನೀವಿಂದು ಅನುಸರಿಸಬೇಕಾದ ವಿಧಾನ. ಅದರಿಂದ ಒಳಿತಾಗಲಿದೆ.

ತುಲಾ
ವೃತ್ತಿಯಲ್ಲಿ ಸಂಘರ್ಷಕ್ಕೆ ಹೋಗದಿರಿ. ಅದರಿಂದ ನಿಮಗೇ ಅನನುಕೂಲ. ಮನೆಯಲ್ಲೂ ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಸಹನೆ ಇಂದು ಅತೀ ಅವಶ್ಯ.

ವೃಶ್ಚಿಕ
ಇತರರು ಸೃಷ್ಟಿಸಿದ ಸಮಸ್ಯೆಯಲ್ಲಿ ನೀವು ಸಿಕ್ಕಿಬೀಳುವ ಸಂಭವ. ನಿಮ್ಮದೇ ಪ್ರಯತ್ನದಿಂದ ಅದನ್ನು ನಿಭಾಯಿಸಲು ಶಕ್ತರಾಗುವಿರಿ. ಕೆಲವರ ಸಂಗ ಒಳಿತು ತಾರದು.

ಧನು
ಕೆಲವು ಪ್ರಮುಖ ವಿಷಯಗಳಲ್ಲಿ ಅಜ್ಞಾನಿಯಾಗದಿರಿ. ಅದು ನಿಮಗೆ ಪ್ರತಿಕೂಲ ಆದೀತು.  ಎಲ್ಲ ವಿಷಯ ತಿಳಿದುಕೊಳ್ಳುವುದು ಅವಶ್ಯ.

ಮಕರ
ಪ್ರತೀ ಸಣ್ಣ ವಿಷಯ ವನ್ನೂ ಸರಿಯಾಗಿ ಗಮನಿಸಿ. ಅವು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಯಾವುದೇ ದುಸ್ಸಾಹಸಕ್ಕೆ ಹೋಗದಿರಿ.

ಕುಂಭ
ಮನೆಯಲ್ಲೂ , ಉದ್ಯೋಗದಲ್ಲೂ ಅತಿಯಾದ ಒತ್ತಡ. ಹಲವಾರು ಕೆಲಸ ಒಮ್ಮೆಗೆ ಹೆಗಲ ಮೇಲೆ ಬೀಳುವುದು. ಸಹನೆಯಿರಲಿ.

ಮೀನ
ಮಹತ್ವವಾದುದು ಸಂಭವಿಸಬಹುದು. ನಿಮ್ಮ ಭಾವತೀವ್ರತೆ ಆಪ್ತರ ಬಳಿ ಹಂಚಿಕೊಳ್ಳುವಿರಿ. ಮನಸ್ಸು ನಿರಾಳವಾಗುವ ಬೆಳವಣಿಗೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!