ದಿನಭವಿಷ್ಯ | ಖಾಸಗಿ ಬದುಕಿನತ್ತ ಹೆಚ್ಚಿನ ಗಮನಹರಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ವೃತ್ತಿಯಲ್ಲಿನ ಸವಾಲು ಗಳನ್ನು ಸುಲಭದಲ್ಲಿ ಎದುರಿಸುವಿರಿ. ಕಷ್ಟಗಳು ನಿಮ್ಮನ್ನು ಬಾಧಿಸವು. ಆದರೆ ಕೌಟುಂಬಿಕ ವಿಚಾರ ದಿಂದ ಅಸಹನೆ.

ವೃಷಭ
ಎಲ್ಲರೊಂದಿಗೆ ಸಮಾಧಾನದಿಂದ ವರ್ತಿಸಿ. ಅಸಹನೆ ಯನ್ನು ಹೊರಗೆ ಹಾಕಬೇಡಿ. ನಿಮ್ಮೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿರಿ.

ಮಿಥುನ
ಸಂಗಾತಿ ಜತೆಗೆ ಸೌಹಾರ್ದದಿಂದ ವರ್ತಿಸಿರಿ. ಕೆಟ್ಟ ಮಾತು ನೆಮ್ಮದಿ ಹಾಗೂ ಸಂಬಂಧ ಕೆಡಿಸಬಹುದು. ಆರ್ಥಿಕ ಒತ್ತಡ ಹೆಚ್ಚು.

ಕಟಕ
ಖಾಸಗಿ ಬದುಕಿಗೆ ಹೆಚ್ಚು ಗಮನ ಕೊಡಿ. ಕೆಲವು ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಆರೋಗ್ಯ ಕೆಡುವ, ತಂಪು ವಸ್ತುಗಳನ್ನು ಸೇವಿಸಬೇಡಿ.

ಸಿಂಹ
ಕೆಲವರ ಒತ್ತಡಗಳು ನಿಮಗೆ ಅಸಹನೀಯ ಎನಿಸುತ್ತದೆ. ಕೆಲವು ಕಟ್ಟುಪಾಡುಗಳಿಂದ ಹೊರಬರಲು ಯತ್ನಿಸುವಿರಿ. ಆದರೆ ಅಸಫಲರಾಗುವಿರಿ.

ಕನ್ಯಾ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ನಿರಾಳವಾಗಿ ಇಂದು ದಿನ ಕಳೆಯುವಿರಿ. ಇರುವುದರಲ್ಲೆ ತೃಪ್ತಿ ಪಡೆಯುವಿರಿ. ಅದರಿಂದಲೇ ಆನಂದ.

ತುಲಾ
ಪ್ರಯತ್ನಗಳಿಗೆ ಫಲ. ಆದರೆ ಪ್ರಯತ್ನಪಡದೇ ಫಲ ಸಿಗಬೇಕೆಂದು ನಿರೀಕ್ಷಿಸದಿರಿ. ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ಸಲ್ಲದು. ಸಹನೆಯಿಂದ ವರ್ತಿಸಿರಿ.

ವೃಶ್ಚಿಕ
ಇಂದು ಎಲ್ಲವೂ ನಿಧಾನಗತಿಯಲ್ಲಿ ಸಾಗುವುದು. ಹಾಗಾಗಿ ಅನವಶ್ಯ ಧಾವಂತ ತೋರದಿರಿ. ಮಾತು ನಿಯಂತ್ರಣ ತಪ್ಪದಂತೆ ನೋಡಿಕೊಳ್ಳಿ.

ಧನು
ಎಲ್ಲರೊಂದಿಗೆ ಹೊಂದಾಣಿಕೆಯಿಂದ ವರ್ತಿಸಲು ಸಫಲ ರಾಗುವಿರಿ. ಇದರಿಂದ ಕಷ್ಟದ ಕೆಲಸವನ್ನು ಸುಲಭವಾಗಿ ಸಾಧಿಸುವಿರಿ.

ಮಕರ
ಖರ್ಚು ಹೆಚ್ಚು. ನಿರೀಕ್ಷಿಸದ ಖರ್ಚು ಒದಗಿಬರುವುದು. ದೈಹಿಕ ಶ್ರಮ ಕಡಿಮೆ ಮಾಡಿ. ಬೆನ್ನು ನೋವಿನ ಸಾಧ್ಯತೆಯಿದೆ. ವಿಶ್ರಾಂತಿ ಪಡೆಯಿರಿ.

ಕುಂಭ
ಯಶಸ್ವೀ ದಿನ. ಪ್ರಯಾಣದ ಉದ್ದೇಶ ಈಡೇರಲಿದೆ. ಕೌಟುಂಬಿಕ ಹೊಂದಾಣಿಕೆಯು ಬಿಕ್ಕಟ್ಟನ್ನು  ಸುಲಭದಲ್ಲಿ ಪರಿಹರಿಸುವುದು.

ಮೀನ
ಆರ್ಥಿಕ ಲಾಭದ ಸಂಕೇತಗಳಿವೆ. ಅದಕ್ಕೆ ಪೂರಕವಾದ ಕ್ರಮ ಕೈ ಗೊಳ್ಳಿರಿ. ಪ್ರಯತ್ನವೇ ಪಡದೆ ಕಾರ್ಯ ಸಾಧನೆಯನ್ನು ನಿರೀಕ್ಷಿಸಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!