Monday, October 3, 2022

Latest Posts

ದಿನಭವಿಷ್ಯ | ಕಠಿಣ ಸವಾಲೊಂದು ಸುಲಭವಾಗಿ ಮುಕ್ತಾಯ ಕಾಣುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಆರ್ಥಿಕ ಗುರಿಯೊಂದು ಇಂದು ಈಡೇರುವ ಸಾಧ್ಯತೆಗಳಿವೆ. ಇತರರಿಗೆ ನೆರವೀಯುವ ನಿಮ್ಮ ಉದ್ದೇಶ ಫಲಿಸುವುದು. ಕೌಟುಂಬಿಕ ಸಮ್ಮಿಲನ, ಸಂತೋಷ ಕೂಟ.

ವೃಷಭ
ಮನೆಯಲ್ಲಿ ಎಲ್ಲರ ಜತೆ ಬೆರೆಯುವ ಅವಕಾಶ. ಕೌಟುಂಬಿಕ ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಮೂಡಿದ್ದ ಸಮಸ್ಯೆ ಪರಿಹಾರ. ಒಟ್ಟಿನಲ್ಲಿ ಮಾನಸಿಕ ನಿರಾಳತೆ.

ಮಿಥುನ
ಆತ್ಮೀಯರ  ಚರ್ಯೆ  ಬೇಗುದಿ ಸೃಷ್ಟಿಸುವುದು. ಭಾವನಾತ್ಮಕ ತಳಮಳ ಅನುಭವಿಸುವಿರಿ. ಆದರೆ ವಿವೇಕದಿಂದ ನಡಕೊಳ್ಳಿ, ದುಡುಕಿನಿಂದ ವರ್ತಿಸಬೇಡಿ.

ಕಟಕ
ಮಾತು ಮನೆ ಕೆಡಿಸಬಹುದು ಎಂಬ ಮಾತನ್ನು ನೀವು ಇಂದು ನೆನಪಿಡಬೇಕು. ಮಾತಿನಲ್ಲಿ ಸಂಯಮ ತಾಳಬೇಕು. ಇಲ್ಲವಾದರೆ ಸಂಬಂಧ ಕೆಟ್ಟೀತು.

ಸಿಂಹ
ವೃತ್ತಿ ಕ್ಷೇತ್ರದಲ್ಲಿ ಒತ್ತಡ, ಸಂಘರ್ಷ, ವಾಗ್ವಾದ ನಡೆಯಬಹುದು. ಇದರಿಂದ ಮಾನಸಿಕ ನೆಮ್ಮದಿ ಕಲಕುವುದು. ಕೌಟುಂಬಿಕ ಪರಿಸರದ ಮೇಲೂ ಪರಿಣಾಮ.

ಕನ್ಯಾ
ಆಪ್ತರೊಂದಿಗೆ ಸಣ್ಣಪುಟ್ಟ ಜಗಳ ನಡೆಯುವುದು ಸಹಜ. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಹೊಂದಾಣಿಕೆ ಮುಖ್ಯ ಎಂಬುದರಿಯಿರಿ.

ತುಲಾ
ಉದ್ದಿಮೆಯಲ್ಲಿ ಯಶಸ್ಸು. ಹಣದ ಕೊರತೆ ನೀಗುವುದು. ಸೂಕ್ತ ಸಮಯದಲ್ಲಿ ನೆರವು ಪಡೆಯುವಿರಿ. ನೌಕರರಿಗೆ ಆರ್ಥಿಕ ಉನ್ನತಿ ಸಂಭವ.

ವೃಶ್ಚಿಕ
ಆಪ್ತರೆನಿಸಿದವರೇ ನಿಮ್ಮನ್ನು ಕೆಣಕುವ ಮಾತನಾಡುವರು. ಇದರಿಂದ ಅಸಹನೆ ತಾಳುವಿರಿ. ಸಂಘರ್ಷ ವಿಕೋಪಕ್ಕೆ ಕೊಂಡೊಯ್ಯದಿರಿ.

ಧನು
ನಿಮ್ಮ ಸುತ್ತಲಿನ ವ್ಯಕ್ತಿಗಳ ನಡವಳಿಕೆ ನಿಮಗೆ ಸರಿಕಾಣದೆ ಇರಬಹುದು. ಅದನ್ನು ತೀಕ್ಷ್ಣವಾಗಿ ವಿರೋಧಿಸಬೇಡಿ. ತಾಳ್ಮೆಯಿಂದ ವ್ಯವಹರಿಸಿ.

ಮಕರ
ಕಠಿಣ ಕೆಲಸವೊಂದು ಸುಲಭದಲ್ಲಿ ಮುಕ್ತಾಯ ಕಾಣುವುದು. ನಿಮ್ಮ ಒತ್ತಡ ನಿವಾರಣೆ. ಬಂಧುಗಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಆರ್ಥಿಕ ಸುಧಾರಣೆ.

ಕುಂಭ
ಸವಾಲಿನ ಕೆಲಸ ಮಾಡುವಾಗ ಎಚ್ಚರ ವಹಿಸಿ.  ಆರ್ಥಿಕ ವಿಚಾರದಲ್ಲಿ ದುಡುಕಿನ ನಿರ್ಧಾರ ತಾಳದಿರಿ. ಆಹಾರದಲ್ಲಿ ಹಿತಮಿತ ಸಾಧಿಸಿರಿ.

ಮೀನ
ಆತ್ಮೀಯ ಬಂಧುವಿನ ಜತೆ ಭಿನ್ನಮತ ಮೂಡಬಹುದು. ಅದನ್ನು ಸಂಧಾನದಿಂದ ಪರಿಹರಿಸಿ. ಆರ್ಥಿಕ ಒತ್ತಡ ಹೆಚ್ಚಳ.  ಖರ್ಚು ಅಧಿಕ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!