ದಿನ ಭವಿಷ್ಯ | ವೃತ್ತಿಯಲ್ಲಿ ಯಶಸ್ಸು, ಆರ್ಥಿಕ ಉನ್ನತಿ, ಕಾರ್ಯಕ್ಕೆ ಸೂಕ್ತ ಪ್ರತಿಫಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ವೃತ್ತಿಯಲ್ಲಿ ಯಶಸ್ಸು. ಆರ್ಥಿಕ ಉನ್ನತಿ. ನಿಮ್ಮ ಕಾರ್ಯಕ್ಕೆ ಸೂಕ್ತ ಪ್ರತಿಫಲ. ಸಮಾನ ಮನಸ್ಕರ ಜತೆ ವಿಚಾರವಿನಿಮಯ ಅವಕಾಶ.

ವೃಷಭ
ಆರ್ಥಿಕ ಪ್ರಗತಿ. ಖರ್ಚು ಹೆಚ್ಚಿದರೂ ಉಳಿತಾಯವೂ ಸಾಧ್ಯ. ಉದ್ಯಮಿಗಳಿಗೆ ಹೆಚ್ಚು ವ್ಯವಹಾರ. ಕೌಟುಂಬಿಕ ಪರಿಸರದಲ್ಲಿ ಶಾಂತಿ, ಸಮಾಧಾನ.

ಮಿಥುನ
ನಿಮ್ಮ ಕಾರ್ಯಶೈಲಿ, ವ್ಯವಹಾರ ಇತರರ ಮೆಚ್ಚುಗೆ ಗಳಿಸುವುದು. ಅದರಿಂದ ಸೂಕ್ತ ಪ್ರತಿಫಲವೂ ಲಭ್ಯ.  ಕೌಟುಂಬಿಕ ಒತ್ತಡ ನಿವಾರಣೆ.

ಕಟಕ
ವೃತ್ತಿಯಲ್ಲಿ ಆಗಾಗ ಅಸಹನೆ ಉಂಟಾದೀತು. ಸುತ್ತಲಿನವರ ಮೇಲೆ ರೇಗುವ ಸಾಧ್ಯತೆ. ಹಣದ ವಿಚಾರದಲ್ಲಿ ನೀವು ಬಯಸಿದ ಪ್ರಗತಿ ಉಂಟಾಗದು.

ಸಿಂಹ
ವೃತ್ತಿಯ ಸಮಸ್ಯೆಗಳನ್ನು ಖಾಸಗಿ  ಬದುಕಿನ ಒಳಗೆ ತರಬೇಡಿ. ಅದರಿಂದ ಕೌಟುಂಬಿಕ ಶಾಂತಿ ಹಾಳಾದೀತು. ಆರ್ಥಿಕ ಸಮಸ್ಯೆ ಪರಿಹಾರದ ಸಂಕೇತ ತೋರುವುದು.

ಕನ್ಯಾ
ನಿಮ್ಮ ಕರ್ತವ್ಯ ಸುಲಭವಾಗಿ ನಿಭಾಯಿಸುವಿರಿ. ಆದರೂ ಕೆಲವರಿಗೆ ಅದು ತೃಪ್ತಿ ತಾರದು. ನಿಮ್ಮ ಕೆಲಸದಲ್ಲಿ ಕುಂದು ಹುಡುಕುತ್ತಾರೆ.

ತುಲಾ
ನಿಮ್ಮ ಕೆಲಸದಲ್ಲಿ ನಿರಾಸಕ್ತಿ ತೋರದಿರಿ. ಅದು ಮೇಲಿನವರ ಗಮನಕ್ಕೆ ಬಂದೀತು. ಆತ್ಮೀಯರ ಜತೆ ಅನವಶ್ಯವಾಗಿ ಕ್ರೋಧಗೊಳ್ಳದಿರಿ.

ವೃಶ್ಚಿಕ
ನಿಮ್ಮ ಆರ್ಥಿಕ ಪರಿಸ್ಥಿತಿ ಸರಿಯಾಗಿ ನಿಭಾಯಿಸಿ. ಅತಿಯಾದ ರಿಸ್ಕ್ ತೆಗೆದುಕೊಳ್ಳದಿರಿ. ಆರ್ಥಿಕ ಮುಗ್ಗಟ್ಟು ಉಂಟಾದೀತು. ಅಸಹನೆ ಹೆಚ್ಚಳ.

ಧನು
ಕೆಲಸದಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ಸರಿಯಾಗಿ ನಿಭಾಯಿಸಿ. ಇತರರ ಮೇಲೆ ಹೊಣೆ ಜಾರಿಸಲು ಯತ್ನಿಸದಿರಿ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ.

ಮಕರ
ನಿಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳ ಜತೆ ಸಮಯ ಕಳೆಯುವಿರಿ. ಭಾವನೆಗಳ ವಿನಿಮಯಕ್ಕೆ ಅವಕಾಶ ಸಿಗಲಿದೆ.

ಕುಂಭ
ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು. ಆರೋಗ್ಯ ಪರಿಸ್ಥಿತಿ ಸುಧಾರಣೆ. ಕೆಲವರು ನಿಮ್ಮ ನೆರವು ಕೇಳಿ ಬಂದಾರು. ಕೌಟುಂಬಿಕ ಸಹಕಾರ.

ಮೀನ
ನಿಮ್ಮ ವಿಶ್ವಾಸ ವೃದ್ಧಿಸುವ ಬೆಳವಣಿಗೆ. ನಿಮಗೆ ವಹಿಸಿದ ಕೆಲಸವನ್ನು ಸರಿಯಾಗಿ ನಿಭಾಯಿಸುವಿರಿ. ನಿಮ್ಮ ಟೀಕಾಕಾರರಿಗೆ ಮುಖಭಂಗ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!