ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಇಂದು ನಿಮ್ಮ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯ ನೀಡಬೇಕು. ಆರ್ಥಿಕ ಪ್ರಗತಿ ನಿಧಾನ. ಅನವಶ್ಯ ಚಿಂತನೆಯಿಂದ ಮನಸ್ಸಿಗೆ ಗೊಂದಲ.
ವೃಷಭ
ವೃತ್ತಿಯಲ್ಲಿ ಸುಗಮ ಪ್ರಗತಿ. ಧನಗಳಿಕೆ ಹೆಚ್ಚಳ. ಆತ್ಮೀಯರ ಜತೆ ಹೆಚ್ಚು ಕಾಲ ಕಳೆಯಲು ಯತ್ನಿಸಿ. ಅವರ ಸಂತೋಷಕ್ಕೆ ಅವಕಾಶ ಕಲ್ಪಿಸಿ.
ಮಿಥುನ
ನಿಮ್ಮ ಆಕಾಂಕ್ಷೆ ಈಡೇರುವ ದಿನ. ನಿಮ್ಮ ಸಣ್ಣ ಹೆಜ್ಜೆಯೂ ಮಹತ್ತರ ಪರಿಣಾಮ ಬೀರಲಿದೆ. ಆಪ್ತರಿಂದ ಸಹಕಾರ. ಧನಲಾಭ ಯೋಗ.
ಕಟಕ
ಇತರರ ಮನಸ್ಸು ಅರಿಯುವಲ್ಲಿ ನೀವು ಚತುರರು. ಅದನ್ನು ನಿಮ್ಮ ಕಾರ್ಯಕ್ಕೆ ಬಳಸಿಕೊಳ್ಳಿ. ದಂಪತಿ ಮಧ್ಯೆ ಕಲಹ ಆದೀತು. ಸಹನೆ ಮುಖ್ಯ.
ಸಿಂಹ
ವೃತ್ತಿಯಲ್ಲಿ ಮಹತ್ವದ ದಿನ. ಉಜ್ವಲ ಅವಕಾಶ. ಮನೆಯಲ್ಲಿ ಸಾಮರಸ್ಯ, ಬಾಂಧವ್ಯ ವೃದ್ಧಿ. ಅಧಿಕ ಖರ್ಚು ಸ್ವಲ್ಪ ಮಟ್ಟಿನ ಚಿಂತೆಗೆ ಕಾರಣವಾಗಲಿದೆ.
ಕನ್ಯಾ
ನಿಮ್ಮ ಕಾರ್ಯ ಸರಿಯಾಗಿ ನಿರ್ವಹಿಸಿ. ನಿಮ್ಮನ್ನು ಪರಾಮರ್ಶೆಗೆ ಒಡ್ಡುವ ಜನರಿದ್ದಾರೆ. ಕೌಟುಂಬಿಕ ವಾಗ್ವಾದ ನೆಮ್ಮದಿ ಕೆಡಿಸಬಹುದು.
ತುಲಾ
ನಿಮ್ಮ ಸಾಮರ್ಥ್ಯ, ಕೌಶಲ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ನಿಮ್ಮ ಭಾವುಕ ಮನಸ್ಸಿನ ಪ್ರದರ್ಶನ ಆಗಲಿದೆ. ಆರ್ಥಿಕ ಒತ್ತಡ ಅಽಕ.
ವೃಶ್ಚಿಕ
ನಿಮಗೆ ಪೂರಕ ದಿನ. ಅಲ್ಪ ಪ್ರಯತ್ನದಲ್ಲೂ ಯಶಸ್ಸು ಸಿಗಲಿದೆ. ಮನೆಯ ವಾತಾವರಣ ಹಾಳಾಗಲು ಅವಕಾಶ ಕೊಡಬೇಡಿ.
ಧನು
ಆಕಾಂಕ್ಷೆ ಈಡೇರಿಕೆ. ಉತ್ಸಾಹ ಹೆಚ್ಚಳ. ಆರ್ಥಿಕ ಬಿಕ್ಕಟ್ಟು ಪರಿಹಾರ. ಮನೆಯಲ್ಲಿ ಎಲ್ಲರ ಸಹಕಾರ. ಖಾಸಗಿ ಚಿಂತೆ ಪರಿಹಾರದ ಸಂಕೇತ.
ಮಕರ
ನಿಮ್ಮ ಕಠಿಣ ಶ್ರಮ ಉತ್ತಮ ಫಲ ನೀಡಲಿದೆ. ಆರ್ಥಿಕ ಗಳಿಕೆ ಹೆಚ್ಚಳ. ವ್ಯವಹಾರದಲ್ಲಿ ತಾಳ್ಮೆಯ ಪರೀಕ್ಷೆ ನಡೆಯಲಿದೆ. ಕೋಪ ನಿಗ್ರಹಿಸಿ.
ಕುಂಭ
ಇಂದು ನಿಮ್ಮ ಸುತ್ತ ಹರ್ಷದ ವಾತಾವರಣ. ಕಾರ್ಯ ಸಿದ್ಧಿ, ಧನ ಗಳಿಕೆ. ಉಳಿತಾಯದಲ್ಲಿ ಹೆಚ್ಚಳ. ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.
ಮೀನ
ಪ್ರತಿ ವಿಷಯವೂ ಸುಗಮವಾಗಿ ಸಾಗಲಿದೆ.ನಿಮ್ಮ ಕನಸು ನನಸಾಗುವ ಕಾಲ ಬಂದಿದೆ. ಬಿಕ್ಕಟ್ಟು ಒಂದೊಂದಾಗಿ ಪರಿಹಾರ.



