ಆಂಧ್ರದಲ್ಲಿ ಭೀಕರ ಅಪಘಾತ, ಲಾರಿ ಪಲ್ಟಿಯಾಗಿ 7 ಕೂಲಿ ಕಾರ್ಮಿಕರು ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಪಲ್ಟಿಯಾಗಿ 7 ಕೂಲಿ ಕಾರ್ಮಿಕರು ದುರ್ಮರಣ ಹೊಂದಿದ್ದಾರೆ.

ಪೂರ್ವ ಗೋದಾವರಿ ಜಿಲ್ಲೆಯ ದೇವರಪಲ್ಲಿ ತಾಲೂಕಿನ ಚಿಲಕವಾರಿಪಾಕಲ ಎಂಬ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಮೃತರ ಪೈಕಿ 6 ಕಾರ್ಮಿಕರು ತಾಡಿಮಳ್ಳ ಗ್ರಾಮದ ನಿವಾಸಿಗಳು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಡಂಬಿ ಲೋಡ್​​ ತುಂಬಿಕೊಂಡು ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ದುರಂತ ಸಂಭವಿಸಿದೆ.

ಮಂಗಳವಾರ ರಾತ್ರಿ ಈ ರಸ್ತೆ ಅಪಘಾತ ಸಂಭವಿಸಿದೆ. ನರಸಾಪುರಂ ಮಂಡಲದ ಬೊರ್ರಂಪಾಲೆಂನಿಂದ ನಿಡದವೋಲು ಮಂಡಲದ ತಾಡಿಮಲ್ಲ ಕಡೆಗೆ ಲಾರಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಿನ್ನಾಯಗುಡೆಂ ಉಪನಗರದಲ್ಲಿ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಅಪಘಾತವಾದ ಲಾರಿಯಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೇವರಪಲ್ಲಿ ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊವ್ವೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರೆಲ್ಲರೂ ನೀಡದವೋಲು ಮಂಡಲದ ತಾಡಿಮಲ್ಲ ಗ್ರಾಮದವರು. ತಮ್ಮಿ ರೆಡ್ಡಿ ಸತ್ಯನಾರಾಯಣ (45), ದೇಶಭಟ್ಟುಲ ವೆಂಕಟರಾವ್ (40), ಬೊಕ್ಕ ಪ್ರಸಾದ್ (32), ಪೆನುಗುರ್ತಿ ಚಿನ್ನ ಮುಸಲಯ್ಯ (35), ಕತ್ತಿವ ಕೃಷ್ಣ (40), ಕತ್ತಿವ ಸತ್ತಿಪಂಡು (40), ತಾಡಿ ಕೃಷ್ಣ (45) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!