ಗುಜರಾತ್’ನಲ್ಲಿ ಭೀಕರ ಅಪಘಾತ: ಕೆಟ್ಟು ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ, 10 ಮಂದಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಜರಾತ್‌ನ( Gujarat) ಅಹಮದಾಬಾದ್‌ ಬಳಿ ಕೆಟ್ಟು ನಿಂತಿದ್ದ ಟ್ಯಾಂಕರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲಾ 10 ಮಂದಿಯೂ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ.

ಇಂದು (ಏಪ್ರಿಲ್ 17) ಸಂಜೆ ಅಹಮದಾಬಾದ್‌-ವಡೋದರ ಎಕ್ಸ್‌ಪ್ರೆಸ್‌ ವೇನಲ್ಲಿ (Ahmedabad-Vadodara Expressway) ಈ ದುರ್ಘಟನೆ ಸಂಭವಿಸಿದ್ದು, ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಗಿದೆ

ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ವಡೋದರದಿಂದ ಅಹಮದಾಬಾದ್‌ ಕಡೆಗೆ ಹೊರಟಿದ್ದ ಕಾರು ನದಿಯಾಡ್‌ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟಾಂಕರ್‌ನ ಹಿಂಬದಿಗೆ ಹೋಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಒಟ್ಟು 10 ಜನರ ಪೈಕಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನುಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ್ದಾರೆ ಎಂದು ಖೇಡಾ ಜಿಲ್ಲಾ ಎಸ್ಪಿ ರಾಜೇಶ್‌ ಗಾಧ್ವಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!