ACCIDENT | ಕೋಲಾರದಲ್ಲಿ ಭೀಕರ ಅಪಘಾತ: ಬೈಕ್‌ನಲ್ಲಿದ್ದ ತಾಯಿ, ಮಗ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಕ್ರಾಸ್ ಬಳಿ ಅಪರಿಚಿತ ವಾಹನ ಬೈಕ್​ಗೆ ಡಿಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ನಡೆದಿದೆ.

ಹಿಟ್​ ಆ್ಯಂಡ್​ ರನ್​ಗೆ ಕೇತಗಾನಹಳ್ಳಿ ನಿವಾಸಿಗಳಾದ ಪದ್ಮಮ್ಮ(48), ಪುತ್ರ ರಘು(26) ಬಲಿಯಾಗಿದ್ದಾರೆ. ಶ್ರೀನಿವಾಸಪುರದಿಂದ ಸ್ವಗ್ರಾಮ ಕೇತಗಾನಹಳ್ಳಿಗೆ ತೆರಳುವಾಗ ದುರಂತ ಸಂಭವಿಸಿದೆ. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನದ ಪತ್ತೆಗಾಗಿ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಶ್ರೀನಿವಾಸಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!