ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಸೌದಿ ಅರೇಬಿಯಾದ ಜಿಜಾನ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಒಂಬತ್ತು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಜೆಡ್ಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಬುಧವಾರ ತಿಳಿಸಿದೆ.
ಸೌದಿ ಅರೇಬಿಯಾದ ಪಶ್ಚಿಮ ವಲಯದ ಜಿಜಾನ್ ಬಳಿ ನಡೆದ ರಸ್ತೆ ಅಪಘಾತದಲ್ಲಿ 9 ಭಾರತೀಯ ಪ್ರಜೆಗಳ ದುರಂತ ನಷ್ಟಕ್ಕೆ ನಾವು ತೀವ್ರ ಶೋಕಿಸುತ್ತೇವೆ ಎಂದು ಭಾರತೀಯ ದೂತಾವಾಸ ತಿಳಿಸಿದೆ. ಅಧಿಕಾರಿಗಳು ಮತ್ತು ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದರು.
ಸಂತ್ರಸ್ತ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಸಂಪೂರ್ಣ ಬೆಂಬಲವನ್ನ ನೀಡುತ್ತಿದೆ ಮತ್ತು ಅಧಿಕಾರಿಗಳು ಮತ್ತು ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಹೆಚ್ಚಿನ ಪ್ರಶ್ನೆಗಳಿಗಾಗಿ ಮೀಸಲಾದ ಸಹಾಯವಾಣಿಯನ್ನ ಸ್ಥಾಪಿಸಲಾಗಿದೆ ಎಂದು ಹೇಳಿದೆ.