February 5, 2026
Thursday, February 5, 2026
spot_img

ಲಾರಿ-ಕ್ರೂಸರ್ ನಡುವೆ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ

ಹೊಸದಿಗಂತ ವರದಿ ಗದಗ:

ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ, ಹದಿನೈದಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಮೃತರನ್ನು ಗಜೇಂದ್ರಗಡದ ಶಿವಾಜಿಪೇಟಿಯ 55 ವರ್ಷದ ಮರಿಯಂಬ ದಾದೇಸಾಬ್‌ ಹುನಗುಂದ, 45 ವರ್ಷದ ಅನ್ನಪೂರ್ಣ ಲಕ್ಷ್ಮಣ ಚಂಗಳಿ ಹಾಗೂ 30ವರ್ಷದ ಸುಜಾತ ರಾಜಪ್ಪ ಹೊಸಮನಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿಗೆ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ.

ಎರಡು ವಾಹನ ಸಂಪೂರ್ಣ ನಜ್ಜುಗಜ್ಜಾಗಿವೆ. ಸ್ಥಳಕ್ಕೆ ಗದಗ ಎಸ್ಪಿ ರೋಹನ್ ಜಗದೀಶ್ ಹಾಗೂ ರೋಣ ಪೊಲೀಸರು ಸ್ಥಳಕ್ಕೆ ಭೇಟಿ‌ ಪರಿಶೀಲನೆ ಮಾಡಿದರು. ನಂತರ ಎಸ್ಪಿ ರೋಹನ್ ಜಗದೀಶ್ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಹೆದ್ದಾರಿ 30ರಲ್ಲಿ ಅಪಘಾತ ಸಂಭವಿಸಿದೆ. ಇದರಲ್ಲಿ 18 ಜನ ಇದ್ದರು ಎಂಬ ಮಾಹಿತಿ ಇದೆ. ಕೆಲವೇ ಹೊತ್ತಲ್ಲಿ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಬಂದಿದ್ದಾರೆ. ಮೂರು ಜನ ಮೃತಪಟ್ಟಿದ್ದು ಖಚಿತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಮೃತರು ಗಜೇಂದ್ರಗಡ ಶಿವಾಜಿ ಪೇಟೆಯ ಕಾರ್ಮಿಕರಾಗಿದ್ದು, ಗಜೇಂದ್ರಗಡದಿಂದ ರೋಣ ಕಡೆಗೆ ಕಡಲೆ ಕೀಳುವ ಕೆಲಸಕ್ಕಾಗಿ ತೆರಳುತ್ತಿದ್ದರು. ಇದೇ ವೇಳೆ ರೋಣದಿಂದ ಗಜೇಂದ್ರಗಡದತ್ತ ಹೊರಟಿದ್ದ ಕ್ಯಾಂಟರ್ ಲಾರಿ ಅಪಘಾತಕ್ಕೆ ಕಾರಣವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ರೋಣ ಪೊಲೀಸ್‌ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೃತರು ಕಡುಬಡವರಾದ್ದರಿಂದ ಅಂತ್ಯಕ್ರಿಯೆಗೆ ಹಾಗೂ ಮಾನವೀಯ ಮೌಲ್ಯಾಧಾರಿತದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದು, ಹೊಟ್ಟೆಪಾಡಿಗಾಗಿ ಊರಿಂದ ಊರಿಗೆ ಅಲೆದು, ಜೀವನ ಸಾಗಿಸುವ ವೇಳೆ ರಸ್ತೆ ಅಪಘಾತ ಮೂಲಕ ಮಸಣ ಸೇರಿದ್ದು ದುರಂತವೆ ಸರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !