ಭೀಕರ ರಸ್ತೆ ಅಪಘಾತ: ಮಹಿಳೆ-ಯುವಕ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶಿರ್ವ- ಕಟಪಾಡಿ ರಾಜ್ಯ ಹೆದ್ದಾರಿಯಲ್ಲಿ ಕೋಡು ಪಂಜಿಮಾರು ಪಾಲಮೆ ಕ್ರಾಸ್ ಸಮೀಪ ಶನಿವಾರ ಸಂಜೆ ಮೂಡುಬಿದ್ರಿಯಿಂದ ಉಡುಪಿಯ ಕಡೆಗೆ ಸಾಗುತ್ತ್ತಿದ್ದ ಕಾರು ಕಟಪಾಡಿ ಯಿಂದ ಶಿರ್ವ ಕಡೆಗೆ ಬರುತ್ತಿದ್ದ ಟೆಂಪೊ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮರಣ ಹೊಂದಿದ್ದು, ಯುವಕನ ಸ್ಥಿತಿ ಗಂಭೀರವಾಗಿದ್ದು, ಉಡುಪಿ ಸರಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನ್ನಪ್ಪಿದ್ದಾರೆ.

ಶಿರ್ವ ಪೋಲಿಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಮೂಲದ ಕಾರು ಎಂದು ತಿಳಿದು ಬಂದಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಸ್ಥಳದಲ್ಲಿ ದೊರೆತ ಲೈಸನ್ಸ್‌ನಲ್ಲಿ ಪವನ್ ಬಿ.ಎಸ್(೨೭) ಎಂದು ನಮೂದಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!