ಮಧ್ಯರಾತ್ರಿ ಭೀಕರ ಮರ್ಡರ್‌: ರಾಡ್‌ನಿಂದ ಹೊಡೆದು ಕೊಂದು ಓಡಿಹೋದ ದುಷ್ಕರ್ಮಿಗಳು

ಹೊಸದಿಗಂತ ವರದಿ ಹುಬ್ಬಳ್ಳಿ:

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ರಾಡ್ ನಿಂದ ತಲೆ ಹೊಡೆದು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ 2 ಗಂಟೆಗೆ ನಗರದ ಹೊರ ವಲಯದ ಗದಗನ ರಿಂಗ್ ರಸ್ತೆಯಲ್ಲಿ ನಡೆದಿದೆ.

ನಗರದ ನಿವಾಸಿ ಸ್ಯಾಮ್ಯುಯಲ್ ಜಾಜ್೯ ಮಬ್ಬು(38) ಕೊಲೆಯಾದ ವ್ಯಕ್ತಿ. ರಾತ್ರಿ 2 ಗಂಟೆ ಸುಮಾರಿಗೆ ಗದಗನ ರಿಂಗ್ ರಸ್ತೆಯಲ್ಲಿ ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೃತ ಸ್ಯಾಮ್ಯುಯಲ್ ಗುರುವಾರ ಸಂಜೆ ಏಳು ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದಾನೆ. ರಾತ್ರಿ 2 ಗಂಟೆಯ ಸುಮಾರಿಗೆ ಯಾರೋ ಅವರನ್ನು ರಾಡ್ ನಿಂದ ಹೊಡೆ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರ ದೂರು ನೀಡಿದ್ದಾರೆ. ಕೊಲೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬೆಂಡಿಗೇರಿ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!