ನೀವು ಎದುರಿಸುತ್ತಿರುವ ಸಮಸ್ಯೆ ಇಂದು ಪರಿಹಾರ ಕಾಣುವುದು. ಹದಗೆಟ್ಟ ಸಂಬಂಧ ಸರಿಪಡಿಸಲು ಆದ್ಯತೆ ಕೊಡಿ. ಆರ್ಥಿಕ ಸಮಸ್ಯೆ ನಿವಾರಣೆ.ವೃಷಭ
ನಿಮ್ಮ ಗುರಿಯನ್ನು ಇಂದು ಸಾಧಿಸುವಿರಿ. ಹಿರಿಯರ ಜತೆ ವಾಗ್ವಾದಕ್ಕೆ ಇಳಿಯದಿರಿ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಸಾಧಿಸಿ.
ಮಿಥುನ
ವೃತ್ತಿಗೆ ಸಂಬಂಧಿಸಿದ ಮುಖ್ಯ ಯೋಜನೆ ಜಾರಿಗೊಳಿಸಲು ಗಮನ ಕೊಡಿ. ಸಮಸ್ಯೆಗಳನ್ನು ಮೊದಲಾಗಿ ನಿವಾರಿಸಿಕೊಳ್ಳಿ. ಆರ್ಥಿಕ ಒತ್ತಡ ಕಾಡಬಹುದು.
ಕಟಕ
ದಂಪತಿ ಮಧ್ಯೆ ತಪ್ಪುಕಲ್ಪನೆ ಉಂಟಾದೀತು. ಮುಕ್ತ ಮಾತುಕತೆಯಿಂದ ಬಿಕ್ಕಟ್ಟು ಪರಿಹಾರ. ಉದ್ಯೋಗದಲ್ಲಿ ಏರುಪೇರು ಅನುಭವಿಸುವಿರಿ.
ಸಿಂಹ
ಆರೋಗ್ಯದ ಬಗ್ಗೆ ಗಮನ ಕೊಡಿ. ಮುಖ್ಯವಾಗಿ ಆಹಾರ ಸೇವನೆಯಲ್ಲಿ ಜಾಗ್ರತೆ ವಹಿಸಿ. ಉದರ ಸಂಬಂಧಿ ಸಮಸ್ಯೆ ಉಂಟಾದೀತು. ಖರ್ಚು ಹೆಚ್ಚುವುದು.
ಕನ್ಯಾ
ಕೌಟುಂಬಿಕ ಸಂಬಂಧ ಸುಧಾರಣೆ. ಭಿನ್ನಾಭಿಪ್ರಾಯ ನಿವಾರಣೆ. ಯೋಜಿಸಿದ ಕಾರ್ಯವನ್ನು ಸಕಾಲದಲ್ಲಿ ಮುಗಿಸಿ, ವಿಳಂಬ ಮಾಡದಿರಿ.
ತುಲಾ
ನಿಮ್ಮ ಗುರಿ ಸಾಧಿಸಬೇಕೆ? ಮೊದಲು ಉದಾಸೀನತೆ ತ್ಯಜಿಸಿ. ಮುತುವರ್ಜಿಯಿಂದ ಕೆಲಸ ಮಾಡಿ. ಕೌಟುಂಬಿಕ ಸೌಹಾರ್ದ ಕಾಯ್ದುಕೊಳ್ಳಿ.
ವೃಶ್ಚಿಕ
ನಿಮ್ಮ ಕಾರ್ಯಕ್ಕೆ ಸಮಾನಮನಸ್ಕರ ಬೆಂಬಲ ಸಿಗುವುದು. ಹಣ ಹೂಡಿಕೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿ. ಕೌಟುಂಬಿಕ ಸಾಮರಸ್ಯ.
ಧನು
ಬಿಡುವಿಲ್ಲದ ದಿನದ ನಡುವೆಯೂ ಪ್ರೀತಿಪಾತ್ರರ ಜತೆ ಕಾಲ ಕಳೆಯುವ ಅವಕಾಶ ಲಭಿಸುವುದು. ಬಂಧುವಿನಿಂದ ಶುಭಸುದ್ದಿ ಕೇಳುವಿರಿ.
ಮಕರ
ಮನೆಯಲ್ಲಿ ಸೌಹಾರ್ದ ವಾತಾವರಣ. ದುಬಾರಿ ವಸ್ತು ಖರೀದಿಯ ಮುನ್ನ ಯೋಚಿಸಿ ಹೆಜ್ಜೆಯಿಡಿ. ನಷ್ಟವಾಗುವ ಸಾಧ್ಯತೆಯಿದೆ.
ಕುಂಭ
ಇಂದು ಶಾಂತಚಿತ್ತರಾಗಿ ವರ್ತಿಸಿ. ಇಲ್ಲವಾದರೆ ಕಾವೇರಿದ ವಾಗ್ವಾದ ನಡೆದೀತು. ಅಧಿಕ ಕೆಲಸದಿಂದ ಒತ್ತಡ ಅನುಭವಿಸುವಿರಿ. ಆರ್ಥಿಕ ಬಿಕ್ಕಟ್ಟು.
ಮೀನ
ಕೆಲವು ಪ್ರಸಂಗಗಳಿಗೆ ಆತುರದಿಂದ ಪ್ರತಿಕ್ರಿಯೆ ತೋರದಿರಿ. ಅನಪೇಕ್ಷಿತ ವಿದ್ಯಮಾನ ಉಂಟಾದೀತು. ಸಂಗಾತಿ ಜತೆಗೆ ಆತ್ಮೀಯ ಕಾಲಕ್ಷೇಪ.