ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ:
ನಿಮ್ಮ ವ್ಯವಹಾರ ಕುಶಲತೆಯು ಕ್ಲಿಷ್ಟ ಪರಿಸ್ಥಿತಿಯಿಂದ ನಿಮ್ಮನ್ನು ಕಾಪಾಡುವುದು. ಕೆಲವರ ಒತ್ತಡಕ್ಕೆ ಮಣಿದು ನಿರ್ಧಾರ ತಾಳಬೇಡಿ. ಹಿತಾಸಕ್ತಿ ಗಮನಿಸಿ.
ವೃಷಭ:
ಪ್ರೀತಿಪಾತ್ರರ ಜತೆ ವ್ಯವಹರಿಸುವಾಗ ನಿಮ್ಮ ನಡೆನುಡಿ ತಪ್ಪರ್ಥ ಕಲ್ಪಿಸದಂತೆ ನೋಡಿಕೊಳ್ಳಿ. ಅನವಶ್ಯ ವಿವಾದ ತಪ್ಪಿಸಿಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು.
ಮಿಥುನ:
ನಿಮ್ಮ ಸಮಸ್ಯೆಗಳಿಗೆ ಇತರರನ್ನು ಮಾತ್ರ ದೂರಬೇಡಿ. ನಿಮ್ಮಲ್ಲೇ ಸಮಸ್ಯೆ ಇರಲೂ ಬಹುದು. ಸ್ವವಿಮರ್ಶೆ ಮಾಡಿಕೊಳ್ಳಿ. ಪರಿಹಾರ ಕಂಡುಕೊಳ್ಳಿ.
ಕಟಕ:
ಇಂದು ನಿಮ್ಮ ವ್ಯವಹಾರ ಸುಗಮವಾಗಿ ಸಾಗುವುದು. ಅಡ್ಡಿಗಳು ತಾವಾಗಿ ನಿವಾರಣೆ. ಬಂಧುಗಳಿಂದ ಉತ್ತಮ ಸಹಕಾರ. ಆರ್ಥಿಕ ಕೊರತೆ ಕಾಡದು.
ಸಿಂಹ:
ಅಸುರಕ್ಷತೆಯ ಭಾವನೆ ಕಾಡುವುದು. ಭವಿಷ್ಯದ ಆತಂಕ.ಇದರಿಂದ ನಿಮ್ಮ ವಿವೇಕ ಮಸುಕಾಗುವುದು. ಸ್ಪಷ ನಿರ್ಧಾರ ತಾಳಲು ವಿಫಲರಾಗುವಿರಿ.
ಕನ್ಯಾ:
ನಿಮ್ಮ ದೈನಂದಿನ ಕಾರ್ಯವನ್ನು ಸಮರ್ಥ ವಾಗಿ ಪೂರೈಸುವಿರಿ. ಆದರೂ ನಿಮ್ಮಲ್ಲಿ ಯಾವುದೋ ಅತೃಪ್ತಿ ಉಳಿದುಕೊಳ್ಳುವುದು. ಭಾವುಕ ಏರುಪೇರು.
ತುಲಾ:
ಅಗತ್ಯವಿಲ್ಲದಿದ್ದರೂ ಅತಿಯಾದ ಖರ್ಚು ಒದಗಲಿದೆ. ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಆಪ್ತ ಬಂಧುಗಳ ಜತೆ ಮನಸ್ತಾಪ ಸಂಭವ. ಸಹನೆ ಕಳಕೊಳ್ಳದಿರಿ.
ವೃಶ್ಚಿಕ:
ಮನೆಯಲ್ಲಿನ ಕೆಲವು ವಿಷಯಗಳು ನೆಮ್ಮದಿ ಕದಡುತ್ತವೆ. ಆಪ್ತರ ಕಾಳಜಿಯು ನಿಮ್ಮ ಮನಸ್ಸಿಗೆ ಸಾಂತ್ವನ ತರುವುದು. ವೃತ್ತಿಯಲ್ಲಿ ಅಧಿಕ ಒತ್ತಡ.
ಧುನು:
ಇಂದು ವ್ಯಕ್ತಿಯೊಬ್ಬರಿಂದ ನಿಮ್ಮ ಮನಶ್ಯಾಂತಿ ಹಾಳಾದೀತು. ಅವರ ವರ್ತನೆ ಅಸಹನೀಯ ಎನಿಸುವುದು. ಅವರನ್ನು ಕಡೆಗಣಿಸುವುದೇ ನಿಮಗೆ ಒಳ್ಳೆಯದು.
ಮಕರ:
ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಕುಟುಂಬದಲ್ಲಿ ಉಂಟಾಗಿದ್ದ ಭಾವನಾತ್ಮಕ ಸಮಸ್ಯೆ ನಿವಾರಣೆಯಾಗುವುದು. ಎಲ್ಲರ ಸಹಕಾರ.
ಕುಂಭ:
ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದರಿಂದ ನೆಮ್ಮದಿ ಹಾಳು. ಮನೆಯಲ್ಲಿ ಕೆಲವು ಅಹಿತಕರ ಬೆಳವಣಿಗೆ. ಮಾನಸಿಕ ಉದ್ವಿಗ್ನತೆ.
ಮೀನ:
ಭಾವನಾತ್ಮಕವಾಗಿ ಇಂದು ಹೆಚ್ಚು ವ್ಯಸ್ತಗೊಳ್ಳುವಿರಿ. ಆಪ್ತರ ಸಂಗಕ್ಕಾಗಿ ಹಾತೊರೆಯುವಿರಿ. ವಿವೇಕವಿರಲಿ, ಅತಿ ಭಾವುಕತೆ ತ್ಯಜಿಸಿ.