ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮ್ಮ ನಿರೀಕ್ಷೆಗೂ ಮೀರಿ ಇಂದು ಸಂತೋಷದಿಂದ ಕಳೆಯುವಿರಿ. ಆಪ್ತರ ಒಡನಾಟ ನಿಮ್ಮ ಹರ್ಷವನ್ನು ಹೆಚ್ಚಿಸುವುದು. ಕರ್ತವ್ಯ ಮರೆಯದಿರಿ.
ವೃಷಭ
ಯಾವುದೇ ಕಾರ್ಯ ಸುಗಮವಾಗಿ ಸಾಗದು. ಸಣ್ಣಪುಟ್ಟ ಅಡ್ಡಿಗಳು. ಉದ್ವಿಗ್ನಗೊಂಡ ನಿಮ್ಮ ಮನಸ್ಥಿತಿಯೂ ಇದಕ್ಕೆ ಕಾರಣ. ಶಾಂತಚಿತ್ತತೆ ಬೆಳೆಸಿಕೊಳ್ಳಿ.
ಮಿಥುನ
ನಿಮ್ಮ ಬದುಕಿನ ಶೈಲಿಯಲ್ಲಿ ಸ್ವಲ್ಪವಾದರೂ ಬದಲಾವಣೆ ತರಬೇಕು. ಇಲ್ಲವಾದರೆ ಸಮಸ್ಯೆಗೆ ಸಿಲುಕುವಿರಿ. ದುಂದುವೆಚ್ಚ ಬೇಡ.
ಕಟಕ
ನಿಮ್ಮ ಕುಶಲತೆ ಇಂದು ಉಪಯೋಗಕ್ಕೆ ಬರುವುದು. ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಆದರೆ ಕೆಲವರ ವರ್ತನೆ ನಿರಾಶೆ ತರುವುದು.
ಸಿಂಹ
ನೀವು ವಿವೇಕದಿಂದ ವರ್ತಿಸಿದರೆ ಇಂದಿನ ದಿನ ಫಲಪ್ರದವಾದೀತು. ನಿಮ್ಮ ಭಾವುಕತೆ ಆನಂದ ಕಸಿಯದಂತೆ ನೋಡಿಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮ.
ಕನ್ಯಾ
ಕಠಿಣ ಪರಿಸ್ಥಿತಿ ಒದಗಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆಪ್ತ ವ್ಯಕ್ತಿಯೊಬ್ಬರ ಕುರಿತು ಅತಿಯಾಗಿ ಚಿಂತಿಸುವಿರಿ. ಭಾವನಾತ್ಮಕ ಒತ್ತಡ.
ತುಲಾ
ಮನೆಯಲ್ಲೂ ಕಚೇರಿಯಲ್ಲೂ ಶುಭಪ್ರದ ಬೆಳವಣಿಗೆ. ಇಷ್ಟಾರ್ಥ ಸಿದ್ಧಿ. ವ್ಯಕ್ತಿಯೊಬ್ಬರ ಮೆಚ್ಚುಗೆ ಗಳಿಸುವ ಯತ್ನಕ್ಕೆ ಭಾಗಶಃ ಯಶಸ್ಸು.
ವೃಶ್ಚಿಕ
ಹೆಚ್ಚು ಪ್ರಾಕ್ಟಿಕಲ್ ಆಗಿ ವರ್ತಿಸಿ. ಪ್ರತೀ ವಿಷಯವನ್ನೂ ಭಾವನಾತ್ಮಕ ದೃಷ್ಟಿಕೋನದಿಂದ ಅಳೆಯಬೇಡಿ. ಅದರಿಂದ ಸಿಗುವುದು ನೋವಷ್ಟೆ.
ಧನು
ನಿಮ್ಮಲ್ಲಿರುವ ಒತ್ತಡ ಶಮನವಾಗುವ ಬೆಳವಣಿಗೆ ಸಂಭವಿಸುವುದು. ಇದರಿಂದ ನಿಮಗೆ ನಿರಾಳತೆ. ಗತಕಾಲದ ನೆನಪಿನಲ್ಲಿ ಕೊರಗದಿರಿ.
ಮಕರ
ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾದೀತು.ಅದನ್ನು ಶಾಂತಚಿತ್ತವಾಗಿ ಪರಿಹರಿಸುವುದು ಒಳಿತು. ಚಾಡಿ ಮಾತು ನಂಬದಿರಿ.
ಕುಂಭ
ಕೆಲಸದಲ್ಲಿ ಉತ್ಸಾಹ.ಹಾಗಾಗಿ ನಿಗದಿತ ಅವಧಿಯಲ್ಲಿ ಕೆಲಸ ಪೂರೈಸುವಿರಿ.ಅನವಶ್ಯ ವೆಚ್ಚಕ್ಕೆ ಕಡಿವಾಣ ಹಾಕಿ.ಆರೋಗ್ಯ ಸಮಸ್ಯೆ ಕಾಣಿಸಿಕೊಂಡೀತು.
ಮೀನ
ಈಡೇರಿಸಲಾಗದ ಆಶ್ವಾಸನೆ ನೀಡದಿರಿ. ಉಳಿದವರ ದೃಷ್ಟಿಯಲ್ಲಿ ಕೀಳಾಗದಿರಿ. ಉದಾಸೀನತೆ ಬಿಟ್ಟು ತಕ್ಷಣವೇ ಕಾರ್ಯ ಮುಗಿಸಲು ಹೊರಡಿ.