ದಿನಭವಿಷ್ಯ| ನಿಮ್ಮ ಸುತ್ತಲಿನ ಜನರೊಂದಿಗೆ  ಹೊಂದಾಣಿಕೆಗೆ ಆದ್ಯತೆ ಕೊಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮೇಷ
ಸಂಘಟಿತ ಕಾರ್ಯ ಫಲ ನೀಡುವುದು. ಆದರೆ ನೀವೊಬ್ಬರೆ ಸಾಧಿಸಲು ಬಯಸಿದ ಕಾರ್ಯ ಸಫಲವಾಗದು. ಬಂಧುಗಳಿಂದ ಸಹಕಾರ. ಪಡೆಯುವಿರಿ.

ವೃಷಭ
ನಿಮ್ಮ ಸುತ್ತಲಿನ ಜನರೊಂದಿಗೆ  ಹೊಂದಾಣಿಕೆಗೆ ಆದ್ಯತೆ ಕೊಡಿ. ಇತರರ ಜತೆ ವಾಗ್ವಾದ, ಸಂಘರ್ಷ ತಪ್ಪಿಸಿರಿ. ಆರ್ಥಿಕ ಕೊರತೆ ಕಾಡುವುದು.

ಮಿಥುನ
ನಿಮಗೆ ಪ್ರೇರಣೆ ನೀಡಬಲ್ಲ ವ್ಯಕ್ತಿಗಳ ಸಂಗ ಬೆಳೆಸಿ. ನೆಗೆಟಿವ್ ಚಿಂತನೆ ತುಂಬುವ ಜನರನ್ನು ದೂರವಿಡಿ. ಸಾಂಸಾರಿಕ ಅಸಮಾಧಾನ ಉಂಟಾದೀತು.

ಕಟಕ
ಕೆಲದಿನಗಳಿಂದ ಕಾಡುತ್ತಿದ್ದ ದೈಹಿಕ ಹಾಗೂ ಮಾನಸಿಕ ನೋವು ಇಂದು ನಿವಾರಣೆ. ಮನಸ್ಸಿಗೆ ನಿರಾಳತೆ ತರುವ ಬೆಳವಣಿಗೆ.

ಸಿಂಹ
ಇತರರ  ವರ್ತನೆ ನಿಮ್ಮ ಮೇಲೆ ಪ್ರಭಾವ ಬೀರಬಹುದು. ಆದರೆ ಅದರಿಂದ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳಿ. ಪ್ರೀತಿಯಲ್ಲಿ ಯಶಸ್ಸು.

ಕನ್ಯಾ
ಆಪ್ತರೊಂದಿಗೆ ಭಿನ್ನಾಭಿಪ್ರಾಯ ಉಂಟಾದೀತು. ಸಹನೆಯಿರಲಿ. ಕಾರ್ಯದಲ್ಲಿ ಯಶಸ್ಸು. ಆರ್ಥಿಕ ಬಿಕ್ಕಟ್ಟು ಹೆಚ್ಚುವುದು.

ತುಲಾ
ಕೌಟುಂಬಿಕ ಕಲಹ, ಅಸಮಾಧಾನ. ಬಂಧುಗಳ ಜತೆ ನಿಮಗೆ ಸರಿಬರುವುದಿಲ್ಲ. ಸಂಘರ್ಷಕ್ಕಿಂತ ಹೊಂದಾಣಿಕೆ ಮುಖ್ಯ ಎಂದರಿಯಿರಿ.

ವೃಶ್ಚಿಕ
ಕೆಲವು ಬೆಳವಣಿಗೆ ನಿಮಗೆ ಅಸಂತೋಷ ಹುಟ್ಟಿಸುವುದು. ಆದರೆ ಆ ಕುರಿತು ನೀವು ಏನೂ ಮಾಡಲಾಗುವುದಿಲ್ಲ. ಅದು ನಿಮ್ಮ ನಿಯಂತ್ರಣದಲ್ಲಿ ಇಲ್ಲ.

ಧನು
ಯಾವುದೇ ವಿಷಯದಲ್ಲಿ ಆತುರದ ತೀರ್ಮಾನ ಬೇಡ. ಅದರಿಂದ ನಿಮಗೆ ಪ್ರತಿಕೂಲ ಆದೀತು. ಕುಟುಂಬಸ್ಥರಿಂದ ಅಸಹಕಾರ.

ಮಕರ
ಮನೆಯಲ್ಲಿ ವಾಗ್ವಾದ ನಡೆದೀತು. ಆದರೆ ನಿಮ್ಮ ಅಭಿಪ್ರಾಯ ಹೇರಲು ಹೋಗಬೇಡಿ. ಇತರರ ಮಾತನ್ನೂ ಕೇಳುವ ಸಹನೆ ಇರಲಿ. ಆರ್ಥಿಕ ಒತ್ತಡ ಹೆಚ್ಚುವುದು.

ಕುಂಭ
ಇತರರ ಒಳಿತಿಗಾಗಿ ನಿಮ್ಮ ಸ್ವಾರ್ಥವನ್ನು ಇಂದು ಬದಿಗೆ ಇಡಬೇಕಾಗುವುದು. ಇತರರ ಸಂತೋಷದಲ್ಲಿ ನಿಮ್ಮ ಹರ್ಷವನ್ನು ಕಾಣುವಿರಿ.

ಮೀನ
ಸಹೋದ್ಯೋಗಿ ಜತೆ ಆತ್ಮೀಯ ಸಂಬಂಧ. ಭಾವನೆಗಳು ಬದಲಾಗಬಹುದು. ಕೆಲವರ ಅಸಮಾಧಾನ ಶಮನಿಸಲು ನೀವು ಆದ್ಯತೆ ಕೊಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!