ಬೆಂಗಳೂರಿನಲ್ಲಿ ಕೇಸರಿ ಕಮಾಲ್:‌ ಪ್ರಧಾನಿ ಮೋದಿ ಎರಡನೇ ದಿನದ ಅದ್ದೂರಿ ರೋಡ್‌ ಶೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಮಲ ಕಲಿಗಳು ಶತಾಯಗತಾಯ ಈ ಬಾರಿಯ ಕರ್ನಾಟಕ ವಿಧಾಸಭೆ ಚುನಾವಣೆಯಲ್ಲಿ ಗೆದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮವಹಿಸುತ್ತಿದ್ದಾರೆ. ಈ ಕ್ರಮದಲ್ಲಿ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿ ಹಾದಿಯಾಗಿ ಕೇಂದ್ರ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆ ಇಂದು ಕೂಡ ಪ್ರಧಾನಿ ರೋಡ್‌ ಶೋ ನಡೆಯಲಿದೆ.

ಈಗಾಗಲೇ ನಿನ್ನೆ 26ಕಿಮೀ ರೋಡ್‌ ನಡೆಸಿರುವ ಪ್ರಧಾನಿಯವರು ಇಂದು ಕೂಡ ಸಿಲಿಕಾನ್‌ ಸಿಟಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಎರಡನೇ ದಿನವೂ 6 ಕ್ಷೇತ್ರಗಳನ್ನ ಗುರಿಯಾಗಿಸಿಕೊಂಡು 6 ಕಿಲೋ ಮೀಟರ್‌ ಸವಾರಿ ಮಾಡಲಿದ್ದಾರೆ. ರೋಡ್‌ ಶೋ ಮೂಲಕವೇ ತಮ್ಮ ಅಭ್ಯರ್ಥಿಗಳ ಪರ ಮತಬೇಟೆಯಾಡಲಿದ್ದಾರೆ.

ಎರಡನೇ ದಿನದಂದು ನ್ಯೂ ತಿಪ್ಪಸಂದ್ರ ರಸ್ತೆಯಿಂದ ಟ್ರಿನಿಟಿ ಸರ್ಕಲ್ ವರೆಗೆ ಬರೊಬ್ಬರಿ 6.5 ಕಿ.ಮೀ ಉದ್ದದ ರೋಡ್ ಶೋ ನಡೆಯಲಿದೆ.  ಬೆಳಿಗ್ಗೆ 10 ಗಂಟೆಗೆ ಕೆಂಪೇಗೌಡ ಪ್ರತಿಮೆಗೆ ನಮನ ಸಲ್ಲಿಸಿ ರೋಡ್ ಶೋ ಆರಂಭಿಸಲಿದ್ದಾರೆ. ಬಳಿಕ ಹೆಚ್​ಎಎಲ್ 2ನೇ ಹಂತ, 80 ಅಡಿ ರಸ್ತೆಯ ಜಂಕ್ಷನ್, ಹೆಚ್​ಎಎಲ್ 2ನೇ ಹಂತ, 12ನೇ ಮುಖ್ಯರಸ್ತೆ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ಟ್ರಿನಿಟಿ ಸರ್ಕಲ್ ತಲುಪಲಿದೆ. ಬೆಳಿಗ್ಗೆ 10 ರಿಂದ 11:30ರವರೆಗೆ ರೋಡ್ ಶೋ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!