Wednesday, June 7, 2023

Latest Posts

ದಿನಭವಿಷ್ಯ| ನಿಮ್ಮನ್ನು ತುಳಿಯಲು ಕಾದಿರುವ ವ್ಯಕ್ತಿಗಳ ಕುರಿತು ಎಚ್ಚರವಿರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಭಾವನಾತ್ಮಕ ಸಂಘರ್ಷ. ಆಪ್ತರೊಬ್ಬರ ಜತೆಗಿನ ಸಂಬಂಧದ ಬಗ್ಗೆ ಸ್ಪಷ್ಟ ನಿಲುವು ತಾಳಲಾಗದೆ ಗೊಂದಲ. ಎಲ್ಲರ ಸಹಕಾರ ಪಡೆದು ಸೂಕ್ತ ನಿರ್ಧಾರ ತಾಳಿ.

ವೃಷಭ
ಪ್ರೀತಿಯ ವಿಷಯದಲ್ಲಿ ನಿಮಗೆ ಪೂರಕ ಬೆಳವಣಿಗೆ. ನಿಮ್ಮ ಲೆಕ್ಕಾಚಾರಗಳೆಲ್ಲ ಸರಿಯಾಗುವುದು. ಬಂಧುಗಳಿಂದ ಸಹಕಾರ ಪಡೆಯುವಿರಿ.

ಮಿಥುನ
ನಿಮ್ಮನ್ನು ತುಳಿಯಲು ಕಾದಿರುವ ವ್ಯಕ್ತಿಗಳ ಕುರಿತು ಎಚ್ಚರವಿರಲಿ.ವಾದಕ್ಕೆ ಇಳಿಯದಿರಿ.ಸಹನೆಯಿಂದ ವರ್ತಿಸಿರಿ. ಎಲ್ಲವೂ ಒಳಿತಾಗುವುದು.

ಕಟಕ
ಮನೆಯಲ್ಲಿ ಮತ್ತು ಕಚೇರಿಯಲ್ಲಿ ಹೆಚ್ಚು ಹೊಣೆಗಾರಿಕೆ.ಆರಂಭದಲ್ಲಿ ಕಷ್ಟ ಪಟ್ಟರೂ ದಿನದಂತ್ಯಕ್ಕೆ ಎಲ್ಲವನ್ನು ಮುಗಿಸಲು ಸಫಲರಾಗುವಿರಿ.

ಸಿಂಹ
ಉದ್ಯೋಗದಿಂದ ಹೊರತಾದ ಇನ್ನಿತರ ಆರ್ಥಿಕ ಮೂಲಗಳಿಗೆ ಹುಡುಕಾಟ ನಡೆಸುತ್ತಿದ್ದರೆ ಅದರಲ್ಲಿ ಸಫಲತೆ ಸಿಗುವುದು.ಕೌಟುಂಬಿಕ ಶಾಂತಿ.

ಕನ್ಯಾ
ನಿಮ್ಮ ಸ್ವಭಾವವು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಅಗತ್ಯ.ಅದರಂತೆ ನಡೆದುಕೊಳ್ಳಿ.

ತುಲಾ
ಆಪ್ತರ ಜತೆ ಸಂಬಂಧದಲ್ಲಿ ಅಹಂ ಸಂಘರ್ಷ ಬರದಂತೆ ನೋಡಿಕೊಳ್ಳಿ. ಕುಟುಂಬ ಸದಸ್ಯರ ಜತೆ ವಾಗ್ವಾದಕ್ಕೆ ಇಳಿಯದಿರಿ ಮೌನ ಸಾಧಿಸಿರಿ.

ವೃಶ್ಚಿಕ
ದೊಡ್ಡ ಸಾಧನೆಯೂ ಇಲ್ಲದ ಹಿನ್ನಡೆಯೂ ಕಾಣದ ಸಾಧಾರಣ ದಿನ. ಖರ್ಚು ಹೆಚ್ಚು. ಇದೇವೇಳೆ, ಆಪ್ತರ ಸಂಗದಲ್ಲಿ ಸಂತೋಷ ಕಾಣುವಿರಿ.

ಧನು
ನಿಮ್ಮ ಹಿತಾಸಕ್ತಿ ರಕ್ಷಣೆಗೆ ಆದ್ಯತೆ ಕೊಡಿ.ನಿಮಗೆ ಸೂಕ್ತವಲ್ಲದ ಪ್ರಸ್ತಾಪಗಳನ್ನು ತಿರಸ್ಕರಿಸಲು ಹಿಂಜರಿಕೆ ಬೇಡ. ಆಮಿಷಕ್ಕೆ ಬಲಿಯಾಗಬೇಡಿ.

ಮಕರ
ಯಶಸ್ವೀ ದಿನ. ಕಾರ್ಯಸಿದ್ಧಿ. ನೀವು ಬಹುಕಾಲದಿಂದ ಕಾಯುತ್ತಿದ್ದ ಬೆಳವಣಿಗೆಯೊಂದು ಇಂದು ಆಗಲಿದೆ.ಅದರಿಂದ ತೃಪ್ತಿ.

ಕುಂಭ
ಉದ್ಯೋಗದಲ್ಲಿ ಶುಭ ಬೆಳವಣಿಗೆ. ವಿಘ್ನ ಗಳು ಪರಿಹಾರ. ಬಂಧು ಗಳಿಂದ ಕಹಿ ಮಾತು ಕೇಳಿ ಬರಬಹುದು. ಅದರಿಂದ ವಿಚಲಿತರಾಗದಿರಿ.

ಮೀನ
ಹೆಚ್ಚಿನ ಏರುಪೇರು ಇಲ್ಲದ ಸಾಧಾರಣ ದಿನ. ಏಕತಾನತೆಯ ಕೆಲಸ ನೀರಸ ಎನಿಸ ಬಹುದು.ಕೌಟುಂಬಿಕ ಪರಿಸರದಲ್ಲಿ ಉತ್ಸಾಹ, ಸಂತೋಷ ಕಾಣುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!