ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮ್ಮ ಕಾರ್ಯದಲ್ಲಿ ಸಫಲತೆ. ಆಶಾವಾದ ಹೆಚ್ಚಿಸುವ ಬೆಳವಣಿಗೆ. ವೈಯಕ್ತಿಕ ಬಂಧುತ್ವ ಸುಧಾರಣೆ. ಆಪ್ತ ವ್ಯಕ್ತಿಗಳ ಜತೆ ಕಳೆಯುವ ಅವಕಾಶ.
ವೃಷಭ
ನಿಮ್ಮ ನಡೆನುಡಿ ಇತರರನ್ನು ಆಕರ್ಷಿಸುವುದು.ಐಷಾರಾಮಿ ವಸ್ತುಗಳಿಗೆ ಅನವಶ್ಯವಾಗಿ ಹಣ ಸುರಿಯಬೇಡಿ. ಮಿತವ್ಯಯ ಸಾಧಿಸಿರಿ.
ಮಿಥುನ
ಅನಿರೀಕ್ಷಿತ ಧನಲಾಭ. ಕೆಲವು ವಿಷಯಗಳಲ್ಲಿ ಕ್ಷಿಪ್ರ ನಿರ್ಧಾರ ತಾಳಬೇಕಾದೀತು. ಹಿಂಜರಿಕೆ ಬೇಡ, ನಿಮ್ಮ ತೀರ್ಮಾನ ಒಳ್ಳೆಯ ಫಲ ನೀಡುವುದು.
ಕಟಕ
ಕೆಲವು ವಿಷಯ ಮನಸ್ಸಿನ ನೆಮ್ಮದಿ ಕದಡುವುದು. ಈ ಕುರಿತಂತೆ ಆತುರದ ನಿರ್ಧಾರ ತಾಳಬೇಡಿ. ಯೋಚಿಸಿ ನಡೆಯಿರಿ. ಕೆಲವರ ಅಸಹಕಾರ ಎದುರಿಸುವಿರಿ.
ಸಿಂಹ
ಆರ್ಥಿಕ ವಿಚಾರದಲ್ಲಿ, ಸಂಬಂಧದ ವಿಷಯದಲ್ಲಿ ಇಂದು ಪೂರಕ ದಿನ. ನಿಮ್ಮ ಅಭೀಷ್ಟ ಈಡೇರುವುದು. ಆರ್ಥಿಕ ಪರಿಸ್ಥಿತಿ ಸುಧಾರಣೆ.
ಕನ್ಯಾ
ಸಂಬಂಧಿಕರ ಸಂಕಷ್ಟವು ನಿಮ್ಮ ಮನಸ್ಥಿತಿಯ ಮೇಲೂ ಪರಿಣಾಮ ಬೀರುವುದು. ವಿವಾದ ಮತ್ತು ಸಂಘರ್ಷದಿಂದ ಇಂದು ದೂರವಿರಿ. ಸಂಯಮ ಒಳಿತು.
ತುಲಾ
ಪ್ರಮುಖ ನಿರ್ಧಾರ ತಾಳುವಲ್ಲಿ ಹಿಂಜರಿಕೆ ಬೇಡ. ಏಕೆಂದರೆ ಅದು ಫಲಪ್ರದವಾಗುವುದು. ಉತ್ತಮ ಸಹಕಾರವೂ ದೊರಕುವುದು. ಕೌಟುಂಬಿಕ ನೆಮ್ಮದಿ.
ವೃಶ್ಚಿಕ
ಆತ್ಮೀಯ ವ್ಯಕ್ತಿಗಳ ಜತೆ ಹೆಚ್ಚು ಕಾಲ ಕಳೆಯಿರಿ. ಇದರಿಂದ ನಿಮ್ಮ ಮಾನಸಿಕ ಬೇಗುದಿ ಕಡಿಮೆಯಾದೀತು. ಆರ್ಥಿಕ ಒತ್ತಡ ಕಾಡುವುದು.
ಧನು
ಕುಟುಂಬ ಸದಸ್ಯರ ಜತೆ ಪ್ರವಾಸ ಹೋಗಲು ಸೂಕ್ತ ದಿನ. ವೃತ್ತಿಯ ಒತ್ತಡವು ಮನಸ್ಸಿನ ಮೇಲೆ ಪರಿಣಾಮ ಬೀರುವುದು. ಆರೋಗ್ಯ ಸಮಸ್ಯೆ ಕಾಡೀತು.
ಮಕರ
ಬಂಧುಗಳಿಂದ ಕಿರಿಕಿರಿ. ಸಣ್ಣ ವಿಷಯವೊಂದು ಬಂಧುಗಳ ಜತೆ ವಿರಸಕ್ಕೆ ಕಾರಣವಾದೀತು. ಊಹಾತ್ಮಕ ವ್ಯವಹಾರದಲ್ಲಿ ಹಣ ಹೂಡಲು ಹೋಗದಿರಿ.
ಕುಂಭ
ಕೆಲವು ಬೆಳವಣಿಗೆ ನಿಮ್ಮ ಮನಸ್ಸಿನ ಶಾಂತಿ ಕಲಕುವುದು. ನಿಮ್ಮಿಂದ ಏನೂ ಮಾಡಲಾಗದ ಅಸಹಾಯಕತೆ. ಕೌಟುಂಬಿಕ ಪರಿಸರದಲ್ಲಿ ಸಮಾಧಾನ.
ಮೀನ
ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ನಿಮ್ಮ ಉತ್ಸಾಹದ ಕಾರ್ಯ ಎಲ್ಲರ ಗಮನ ಸೆಳೆಯುವುದು. ಆದರೆ ದೈಹಿಕ ಬಳಲಿಕೆ ಕಾಡಬಹುದು.