ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ವೃತ್ತಿಯಲ್ಲಿ ಉತ್ತಮ ಸಾಧನೆ. ಇತರರಿಂದ ಶ್ಲಾಘನೆ. ಆದರೆ ಕೌಟುಂಬಿಕವಾಗಿ ಅತೃಪ್ತಿಯ ಬೆಳವಣಿಗೆ. ಮಾನಸಿಕ ದುಗುಡ. ಅಶಾಂತಿ.
ವೃಷಭ
ಮುಂಜಾನೆ ಅತ್ಯಧಿಕ ಕೆಲಸ.ಆದರೆ ಅಪರಾಹ್ನ ನಿರಾಳತೆ. ಸಂಜೆ ವೇಳೆ ಕುಟುಂಬಸ್ಥರ ಜತೆ, ಆತ್ಮೀಯರ ಜತೆ ಆತ್ಮೀಯ ಕಾಲಕ್ಷೇಪ. ನಿಮ್ಮ ಇಂದಿನ ದಿನಚರಿ.
ಮಿಥುನ
ವೃತ್ತಿಯಲ್ಲಿ ಉತ್ತಮ ಅವಕಾಶ ನಿಮಗಿಂದು ದೊರಕಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಇತರರ ಕೊಂಕು ಮಾತುಗಳಿಗೆ ಕಿವಿಗೊಡದಿರಿ.
ಕಟಕ
ಉದ್ದೇಶ ಸಾಧನೆಗೆ ಎಂದಿನ ದಾರಿಯಲ್ಲೇ ಸಾಗದಿರಿ. ಭಿನ್ನ ಶೈಲಿಯಲ್ಲಿ ಕಾರ್‍ಯ ಮಾಡಬೇಕಾಗುವುದು. ಅದರಿಂದಷ್ಟೇ ಸಫಲತೆ ಸಿಗುವುದು.
ಸಿಂಹ
ಸಮಾಧಾನಚಿತ್ತದಿಂದ ಇಂದು ವ್ಯವಹರಿಸ ಬೇಕು.ಸಣ್ಣ ಪುಟ್ಟ ವಿಷಯಗಳಿಗೆ ಸಹನೆ ಕಳೆದುಕೊಳ್ಳದಿರಿ. ದಿನದ ಉತ್ತರಾರ್ಧದಲ್ಲಿ ಧನ ಲಾಭ.
ಕನ್ಯಾ
ಇಂದು ಸಂತೋಷದ ದಿನ. ಆಪ್ತರೊಂದಿಗೆ ಕಾಲಕ್ಷೇಪ. ಉದ್ಯೋಗ ದಲ್ಲಿ ಪ್ರಗತಿ. ಕುಟುಂಬ ಮತ್ತು ವೃತ್ತಿ ಮಧ್ಯೆ ಸಮತೋಲನ ಸಾಧಿಸಿದರೆ ಒಳಿತು.
ತುಲಾ
ಕೆಲವರು ನಿಮ್ಮೊಂದಿಗೆ ಅತಿರೇಕದಿಂದ ವರ್ತಿಸಬಹುದು. ಅವರ ಜತೆ ನೀವು ಮಾತ್ರ ಸಂಯಮದಿಂದ ಪ್ರತಿಕ್ರಿಯಿಸಿ. ಇಲ್ಲವಾದರೆ ಸಂಘರ್ಷ.
ವೃಶ್ಚಿಕ
ಸರಳತೆಯೇ ನಿಮ್ಮ ಮೂಲಮಂತ್ರ. ಅದರಿಂದಲೇ ಕಾರ್‍ಯ ಸಿದ್ಧಿ. ಆಡಂಭರಕ್ಕೆ ಹೋಗದಿರಿ. ಧಾರ್ಮಿಕ ಕಾರ್‍ಯಗಳಲ್ಲಿ ಹೆಚ್ಚು ಆಸಕ್ತಿ ವಹಿಸುವಿರಿ. ಕೌಟುಂಬಿಕ ನೆಮ್ಮದಿ.
ಧನು
ಎಲ್ಲರ ಸಹಕಾರ ಪಡೆದು ಕಾರ್ಯ ಎಸಗಿರಿ. ನೀವೊಬ್ಬರೇ ಮಾಡಲು ಹೊರಟರೆ ಎಡವಿ ಬೀಳುವಿರಿ. ಕೌಟುಂಬಿಕ ಅಸಹಕಾರದಿಂದ ಬೇಸರ.
ಮಕರ
ಆರ್ಥಿಕ ಪರಿಸ್ಥಿತಿ ಸುಧಾರಣೆ. ಆದರೆ ಆರೋಗ್ಯ ಸಮಸ್ಯೆ ಕಾಡಬಹುದು. ಹೊಟ್ಟೆಕೆಡಿಸುವ ತಿನಿಸುಗಳಿಂದ ದೂರವಿರಿ. ಕೌಟುಂಬಿಕ ಸಮಾಧಾನ.
ಕುಂಭ
ಇಂದು ಕಾಲಮಿತಿಯಲ್ಲಿ ಕೆಲಸ ಪೂರೈಸಲಸಾಧ್ಯ. ಹೆಚ್ಚು ಸಮಯ ಬೇಕಾದೀತು. ಭಾವನಾತ್ಮಕ ಸಂಘರ್ಷ. ಸಣ್ಣ ಮಾತೂ ನೋವು ತರಬಹುದು.
ಮೀನ
ದಿನವಹಿ ಕಾರ್‍ಯದಲ್ಲಿ ಅಡ್ಡಿ. ಆದರೂ ನೀವು ಪ್ರಯತ್ನ ನಿಲ್ಲಿಸದಿರಿ. ಅವಶ್ಯ ನೆರವು ನಿಮಗೆ ಒದಗುವುದು. ಕೌಟುಂಬಿಕ ಶಾಂತಿ, ಸಮಾಧಾನ.