ದಿನಭವಿಷ್ಯ| ಅವಿವಾಹಿತರಿಗೆ ವೈವಾಹಿಕ ಸಂಬಂಧ ಕೂಡಿಬಂದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಉದ್ಯೋಗದಲ್ಲಿ  ಜಗಳದಿಂದ ದೂರವಿರಿ. ನಿಮ್ಮ ಕೆಲಸ ಸಾಧಿಸಲು ಇತರರನ್ನು ಅವಲಂಬಿಸದಿರಿ. ಕೆಲವರ ಅಸಹಕಾರ ಎದುರಿಸುವಿರಿ.

ವೃಷಭ
ನಿಮ್ಮ ಮೇಲೆ ದೊಡ್ಡ ಹೊಣೆಗಾರಿಕೆ ಹೇರಲ್ಪಡುವುದು. ಅದನ್ನು ನಿಭಾಯಿಸಲು ಕಷ್ಟಪಡುವಿರಿ.  ಮಾನಸಿಕವಾಗಿ ಒತ್ತಡ ಅನುಭವಿಸುವಿರಿ.

ಮಿಥುನ
ಆರ್ಥಿಕ ಒತ್ತಡ ಹೆಚ್ಚು, ಖರ್ಚು ಅಧಿಕ. ಅವಿವಾಹಿತರಿಗೆ ವೈವಾಹಿಕ ಸಂಬಂಧ ಕೂಡಿಬಂದೀತು. ಬಂಧುಗಳ ಜತೆ ಸೌಹಾರ್ದತೆಯಿರಲಿ.

ಕಟಕ
ಕೆಲವರ ವರ್ತನೆಗ ಕುಗ್ಗಿ ಮಾನಸಿಕ ನೋವು ತಿನ್ನುವಿರಿ. ಆಪ್ತ ಸಂಬಂಧದಲ್ಲಿ ಬಿರುಕು ಸಂಭವ. ಭಾವುಕತೆ ಬದಿಗಿಟ್ಟು  ಪ್ರಾಕ್ಟಿಕಲ್ ಆಗಿ ಚಿಂತಿಸಿ.

ಸಿಂಹ
ಕೆಲವರು ನಯವಾಗಿ ಮಾತನಾಡಿ ನಿಮ್ಮ ಬೆನ್ನ ಹಿಂದೆ ಇರಿಯುತ್ತಾರೆ. ನಿಮ್ಮ ಹಿತಾಸಕ್ತಿಗೆ ಅವರಿಂದ ಸಮಸ್ಯೆಯಿದೆ. ಅವರನ್ನು ದೂರವಿಡಿ.

ಕನ್ಯಾ
ಮಾನಸಿಕ ತುಮುಲ. ಕ್ಲಿಷ್ಟಕರ ವಿಚಾರದಲ್ಲಿ ನಿಮ್ಮ ಅಂತಃಸಾಕ್ಷಿಯ ಪ್ರಕಾರ ನಡಕೊಳ್ಳಿ. ಅಂತಿಮವಾಗಿ ನಿಮಗೆ ಅದರಿಂದ ಒಳಿತೇ ಆಗುವುದು.

ತುಲಾ
ಕಾರ್ಯದಲ್ಲಿ ಅಪಯಶಸ್ಸು. ಮಾನಸಿಕ ತೊಳಲಾಟ. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಖರ್ಚು ಮಾಡಿರಿ. ಬಂಧುಗಳಿಂದ ಕಾಟ, ಕಿರಿಕಿರಿ.

ವೃಶ್ಚಿಕ
ವೈಯಕ್ತಿಕ ಬದುಕಿನಲ್ಲಿ ಆಗುವ  ಕೆಲವು ಬದಲಾವಣೆಗಳು ಮಾನಸಿಕ ಬೇಗುದಿಗೆ ಕಾರಣವಾದೀತು. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ.

ಧನು
ಮಾತುಕತೆಯಿಂದ ವೈಮನಸ್ಸು ಪರಿಹಾರ ಸುಲಭ. ಸಂಘರ್ಷದ ನೀತಿ ಮುಂದುವರಿಸದಿರಿ. ಎಲ್ಲರ ಜತೆ ಕೂಡಿ ವ್ಯವಹರಿಸಿರಿ.

ಮಕರ
ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಆರೋಗ್ಯಕರ ಆಹಾರವನ್ನೆ ಸೇವಿಸಿರಿ.  ಕೌಟುಂಬಿಕ ಪರಿಸರ ಸೌಹಾರ್ದದಾಯಕ.  ಧನವ್ಯಯ ಹೆಚ್ಚಳ.

ಕುಂಭ
ವೃತ್ತಿ ಕ್ಷೇತ್ರದಲ್ಲಿ ವದಂತಿಗಳಿಂದ ದೂರವಿರಿ. ಅವು ನಿಮಗೆ ಹಾನಿ ಮಾಡಬಹುದು. ಮನೆಯ ಸದಸ್ಯರ ಜತೆ ಸಹನೆಯಿಂದ ವರ್ತಿಸಿರಿ.  ಸಂಘರ್ಷ ಬೇಡ.

ಮೀನ
ಹೊರಜಗತ್ತಿನ ಜತೆ ಹೆಚ್ಚು ವ್ಯವಹರಿಸಿ. ಅಂತರ್ಮುಖಿಯಾಗಿ ಕೂರದಿರಿ. ಇದನ್ನು ನೀವು ಪಾಲಿಸಬೇಕು.  ಅನವಶ್ಯ ಕೊರಗುವಿಕೆ ಬಿಟ್ಟುಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!