ದಿನಭವಿಷ್ಯ| ಕೌಟುಂಬಿಕ ವಿಚಾರದಲ್ಲಿ ಹೆಚ್ಚು ಭಾವನಾತ್ಮಕವಾಗಿ ವರ್ತಿಸುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಯಾವುದೋ ವಿಷಯ ಚಿಂತೆಗೆ ಕಾರಣವಾಗುತ್ತದೆ.  ವ್ಯಕ್ತಿಯೊಬ್ಬರು ಮನಸ್ಸಿನ ಸ್ವಾಸ್ಥ್ಯ ಕದಡುತ್ತಾರೆ. ಧಾರ್ಮಿಕ ಆಸಕ್ತಿ ಚಿಂತೆ ಪರಿಹರಿಸಬಹುದು.

ವೃಷಭ
ಹಳೆಯ ನೆನಪು ಕಲಕುವ ವ್ಯಕ್ತಿಗಳ ಭೇಟಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ವ್ಯವಹಾರದಲ್ಲಿ ನಷ್ಟ ಉಂಟಾದೀತು.

ಮಿಥುನ
ಕೌಟುಂಬಿಕ ವಿಚಾರದಲ್ಲಿ ಹೆಚ್ಚು ಭಾವನಾತ್ಮಕವಾಗಿ ವರ್ತಿಸುವಿರಿ. ಆಪ್ತ ರೊಂದಿಗೆ ಭಾವನೆ ಹಂಚಿಕೊಳ್ಳುವುದರಿಂದ ಸಮಾಧಾನ. ಆರ್ಥಿಕ ಹಿನ್ನಡೆ.

ಕಟಕ
ಇಂದು ಹಿನ್ನಡೆ, ನಿರಾಶೆ ಎದುರಿಸಲು ಸಜ್ಜಾಗಿ. ವೃತ್ತಿಯಲ್ಲಿ ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ಹತಾಶೆ, ಅಸಹನೆ ನಿಮ್ಮನ್ನು ಆವರಿಸಬಹುದು.

ಸಿಂಹ
ಸಣ್ಣ ವಿಷಯಗಳಿಗೂ ಇಂದು ಸೂಕ್ಷ್ಮ ಸಂವೇದಿಯಾಗಿ ವರ್ತಿಸುತ್ತೀರಿ. ಕೆಲವು ಬೆಳವಣಿಗೆ ಭಾವೋದ್ವೇಗಕ್ಕೆ  ಕಾರಣವಾಗುತ್ತದೆ.

ಕನ್ಯಾ
ಇಂದು ಭಾವುಕರಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ.ಕೌಟುಂಬಿಕ ವಿಚಾರವನ್ನು ನಿಮ್ಮಲ್ಲೇ ಪರಿಹರಿಸಿಕೊಳ್ಳಿ. ಸಹನೆ ಅತಿ ಮುಖ್ಯ.

ತುಲಾ
ವೃತ್ತಿಯಲ್ಲಿಯೂ ಮನೆಯಲ್ಲಿಯೂ ಕೆಲಸದ ಒತ್ತಡ ಹೆಚ್ಚು. ಹಾಗಾಗಿ ಉಳಿದ  ವಿಚಾರಗಳಿಗೆ ಗಮನ ಹರಿಸಲಾಗುವುದಿಲ್ಲ. ಆರ್ಥಿಕ ಒತ್ತಡ.

ವೃಶ್ಚಿಕ
ಕುಟುಂಬ ಸದಸ್ಯರ ಸಾಧನೆಯು ನಿಮ್ಮಲ್ಲಿ ಹೆಮ್ಮೆ ತುಂಬುವುದು. ಕೆಟ್ಟಿದ್ದ ಸಂಬಂಧ ಮತ್ತೆ ಸರಿಯಾಗುವುದು. ವ್ಯವಹಾರದಲ್ಲಿ ಉನ್ನತಿ ಪಡೆಯುವಿರಿ.

ಧನು
ಕ್ಲಿಷ್ಟಕರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಇತರರು ತಮ್ಮ ತಪ್ಪನ್ನು  ನಿಮ್ಮ ಮೇಲೆ ಹೇರಬಹುದು. ಅದಕ್ಕೆ ಆಸ್ಪದ ಕೊಡದಿರಿ.

ಮಕರ
ನಿಮಗೆ ಅಹಿತಕರವಾದ ಬೆಳವಣಿಗೆ ಸಂಭವಿಸಬಹುದು. ಆಪ್ತರ ಜತೆಗಿನ ಸಂಬಂಧ ಹಾಳಾದೀತು. ಸಮಾಧಾನದಿಂದ  ವ್ಯವಹರಿಸಿರಿ.

ಕುಂಭ
ಇಂದು ಅನಿರೀಕ್ಷಿತ ಖರ್ಚು ಒದಗುವುದು. ಹೊಸ ಆರ್ಥಿಕ ವ್ಯವಹಾರಗಳಿಗೆ ಕೈ ಹಾಕಬೇಡಿ. ಕೌಟುಂಬಿಕ  ವಾಗಿ ಬೇಸರ ತರುವ ಬೆಳವಣಿಗೆ.

ಮೀನ
ದೂರ ಪ್ರಯಾಣ ಸಂಭವ. ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ಕೌಟುಂಬಿಕ ಭಿನ್ನಾಭಿಪ್ರಾಯ ಉಂಟಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!